ಭಾರತದಲ್ಲಿ 20 ನಕಲಿ ವಿಶ್ವವಿದ್ಯಾನಿಲಯಗಳು ಇದ್ದು ಅವು ಯಾವುದೇ ಪದವಿ ನೀಡಲು ಅರ್ಹತೆ ಇಲ್ಲವೇ ಮಾನ್ಯತೆ ಪಡೆದಿಲ್ಲ ಎಂದು ಯುಜಿಸಿ- ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ ಹೇಳಿದೆ.

ದಿಲ್ಲಿ ಅತಿ ಹೆಚ್ಚು ಎಂಟು ನಕಲಿ ವಿಶ್ವವಿದ್ಯಾನಿಲಯಗಳನ್ನು ಹೊಂದಿದೆ. ಎರಡನೆಯ ಸ್ಥಾನದಲ್ಲಿ ಉತ್ತರ ಪ್ರದೇಶ ಇದೆ. ಇಲ್ಲಿ ಆಧ್ಯಾತ್ಮಿಕ ವಿಶ್ವವಿದ್ಯಾನಿಲಯ, ವಿಶ್ವಕರ್ಮ ವಿಶ್ವವಿದ್ಯಾನಿಲಯ ಇತ್ಯಾದಿ ನಕಲಿಗಳಿವೆ. ಕರ್ನಾಟಕದ ಬೆಳಗಾವಿ ಜಿಲ್ಲೆಯ ಬಡಗನವಿ ಸರ್ಕಾರ್ ವರ್ಲ್ಡ್ ಓಪನ್ ಯುನಿವರ್ಸಿಟಿ ಸೊಸೈಟಿ ವಿಶ್ವವಿದ್ಯಾನಿಲಯ ಕೂಡ ಈ ಇಪ್ಪತ್ತು ನಕಲಿಗಳಲ್ಲಿ ಒಂದಾಗಿದೆ.