ಮುಂದಿನ ಏಳು ವರುಷಗಳಲ್ಲಿ ದೇಶದ ನಾನಾ ಕಡೆ ಹದಿನೆಯ್ದು ಏಮ್ಸ್ ಆಸ್ಪತ್ರೆಗಳನ್ನು ಸ್ಥಾಪಿಸುವುದಾಗಿ ಪ್ರಧಾನಿ ಮೋದಿ ಹೇಳಿದರು. ಅವರು ರಾಷ್ಟ್ರೀಯ ವೈದ್ಯರ ದಿನಾಚರಣೆ ಬಗೆಗೆ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದರು.

ಕೊರೋನಾ ಕಾಲದಲ್ಲಿ ವೈದ್ಯರ ತ್ಯಾಗದಿಂದ ಕೋಟಿ ಕೋಟಿ ಜನರ ಜೀವ ಉಳಿದಿದೆ. ಅವರ ಸೇವೆ ಅನನ್ಯ. ಎಲ್ಲ ಕಡೆ ವೈದ್ಯಕೀಯ ಸಂಶೋಧನೆಗಾಗಿ ಏಮ್ಸ್‌ಗಳ ಸ್ಥಾಪನೆಗೆ ಆದ್ಯತೆ ನೀಡುವುದಾಗಿ ಅವರು ಹೇಳಿದರು.