ಕೊಡಗಿನ ಸೋಮವಾರಪೇಟೆ ತಾಲೂಕಿನ ಉಂಜಿಹಳ್ಳಿಯಲ್ಲಿ ಇಬ್ಬರು ಮಕ್ಕಳು ಮೃತರಾಗಿರುವುದು ನಾನಾ ಗುಸುಗುಸುಗಳಿಗೆ ಕಾರಣವಾಗಿದೆ.
15ರ ಮನಿಕ್ಷಾ, 12ರ ಪೂರ್ಣೇಶ್ ಮೃತ ಮಕ್ಕಳು. ಇವರು ಕೃಷಿಕ ಎಚ್. ಆರ್. ಗಿರೀಶ್ ಅವರ ಮಕ್ಕಳು. ಮಕ್ಕಳು ಪಕ್ಕದ ಅಜ್ಜ ಅಜ್ಜಿ ಮನೆಯೊಳಗೆ ಜೋಕಾಲಿ ಕಟ್ಟಿಕೊಂಡು ಆಟ ಆಡುತ್ತಿದ್ದರು. ತೋಟದಿಂದ ಬರುವಾಗ ಸತ್ತಿದ್ದರು. ಜೋಕಾಲಿ ಕುತ್ತಿಗೆಗೆ ಸಿಕ್ಕಿ ಸಾವಾಗಿದೆ ಎಂದು ತಂದೆ ಪೋಲೀಸರಿಗೆ ಹೇಳಿಕೆ ನೀಡಿದ್ದಾರೆ.
ಸಂಶಯಾಸ್ಪದ ಸಾವು ಕೇಸು ದಾಖಲಿಸಿಕೊಂಡಿರುವ ಪೋಲೀಸರು ಶವಪರೀಕ್ಷೆ ವರದಿ ಬಂದ ಬಳಿಕ ಕಾರಣ ತಿಳಿಯಲಾಗುವುದು ಎಂದಿದ್ದಾರೆ.