ಪುತ್ತೂರು ಕ್ಷೇತ್ರದ ಮಾಜೀ ಶಾಸಕ ಸಂಜೀವ ಮಠಂದೂರು ಅವರಿಗೆ ವಿಷದ ಹಾವು ಕಡಿದಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ.

ತಾಲೂಕಿನ ಹಿರೇಬಂಡಾಡಿಯ ಮನೆಯ ತೋಟಕ್ಕೆ ಹೋದಾಗ ಕಟ್ಟು ಹಾವು ಕಚ್ಚಿದೆ. ಕೂಡಲೆ ಅವರಿಗೆ ಮೊದಲ ಚಿಕಿತ್ಸೆ ಒದಗಿಸಿ, ತಾಲೂಕು ಕೇಂದ್ರದ ಆಸ್ಪತ್ರೆಗೆ ಸೇರಿಸಲಾಗಿದೆ.