ಲೋರೆಟ್ಟೊ ಮಾತಾ ಚರ್ಚ್ ನಲ್ಲಿ ಯೇಸು ಕ್ರಿಸ್ತ ಜಯಂತಿ-ಜ್ಯುಬಿಲಿ ಮಹೋತ್ಸವ ಸಂಭ್ರಮವನ್ನು ವಿಜ್ರಂಭನೆಯಿಂದ ಆಚರಿಸಲಾಯಿತು. ಸಾಯಂಕಾಲದ ಬಲಿಪುಜೆಯಲ್ಲಿ ನೂರಾರು ಭಕ್ತಾದಿಗಳು ಭಕ್ತಿಯಿಂದ ಯೇಸು ಕ್ರಿಸ್ತರ ಜನನವನ್ನು ಬಲಿಪುಜೆಯೊಂದಿಗೆ ಆಚರಿಸಿದರು. ಪ್ರಧಾನ ಧರ್ಮಗುರುಗಳಾಗಿ ಧರ್ಮಗುರುಗಳಾದ ವಂ. ಜೋನ್ ಡಿಸೋಜಾ ಚರ್ಚ್ ಧರ್ಮ ಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತಾರವರು, ಲೊರೆಟ್ಟೊ ಅಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ವಂ.ಜೇಸನ್ ಮೋನಿಸ್ ಲೋಕೊದ್ದಾರಕ್ಕಾಗಿ ದರೆಗೆ ಇಳಿದು ಬಂದ ಯೇಸು ಕ್ರಿಸ್ತರ ಜನನದ ಪ್ರಾಮುಖ್ಯತೆಯನ್ನು ಪ್ರವಚನ ಮೂಲಕ ತಿಳಿಸಿದರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳೊಂದಿಗೆ ಬಲಿಪೂಜೆಯನ್ನು ಅರ್ಪಿಸಿದರು.

ಕ್ರಿಸ್ಮಸ್ ಪ್ರಯುಕ್ತ ಧರ್ಮಗುರುಗಳು ತಮ್ಮ ಸಂದೇಶದಲ್ಲಿ ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ ಬಗ್ಗೆ ಸಂದೇಶ ನೀಡಿದರು

ಚರ್ಚ್ ಅವರಣದಲ್ಲಿ ಎಲ್ಇಡಿ ಪರದೆಯನ್ನು ಅಳವಡಿಸಲಾಗಿತ್ತು. ಸಂಬ್ರಮಕ್ಕೆ ಸಹಕರಿಸಿದ ಧಾನಿಗಳಿಗೆ ಗೌರವಪೂರ್ವಕ ವಾಗಿ ಮೇಣದ ಬತ್ತಿಗಳನ್ನು ವಿತರಿಸಲಾಯಿತು. ಯೇಸುಕ್ರಿಸ್ತರ ಜನನವನ್ನು ಸಾರುವ ಸಂದೇಶವನ್ನು ಟ್ಯಾಬ್ಲೋ ಮುಖಾಂತರ ಪೊಳಲಿ ಕೈಕಂಬ ದ್ವಾರ, ಬಂಟ್ವಾಳ ಬೈಪಾಸ್ ಹಾಗೂ ಟಿಪ್ಪು ನಗರ ಹಾಗೂ ಚರ್ಚ್ ಆವರಣದಲ್ಲಿ ಸಮಾಪ್ತಿಗೊಂಡಿತು 

ಚರ್ಚ್ ಹಾಗೂ ಲೊರೆಟ್ಟೊ ಪದವ ನಿಂದ ಅಂಚೆ ಕಚೇರಿವರೆಗೆ ರಂಗು ರಂಗಿನ ವಿದ್ಯುದಿಪಾಲಂಕರದಿಂದ ಕಂಗೊಳಿಸಲಾಗಿತ್ತು. ಬಲಿ ಪೂಜೆಯ ಬಳಿಕ ಐಸಿವೈಮ್ ಸದಸ್ಯರು ಮನರಂಜನ ಕಾರ್ಯಕ್ರಮವನ್ನು ನೀಡಿದರು. ಏಸುಕ್ರಿಸ್ತರ ಜನ್ಮ ದಿನವನ್ನು ಸಾರುವ ಗೋದಲಿಯನ್ನು ವೈಸಿ ಎಸ್ ಸದಸ್ಯರು ನಿರ್ಮಿಸಿದರು.ಸಂಭ್ರಮದಲ್ಲಿ ಪಾಲ್ಗೊಂಡ ಎಲ್ಲಾ ಭಕ್ತಾದಿಗಳಿಗೆ ಕಾಫಿ ಹಾಗೂ ಕೇಕ್ ವಿತರಿಸಲಾಯಿತು. ಚರ್ಚ್ ಪಾಲನಾ ಮಂಡಳಿಯನೇತೃತ್ವದಲ್ಲಿ ಶಿಸ್ತುಬದ್ಧವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಧರ್ಮಗುರುಗಳು ಸಹಕರಿಸಿದ ಸರ್ವರರನ್ನು ವಂದಿಸಿದರು.