ಮಣಿಪುರದಲ್ಲಿ ಪ್ರೊಟೆಸ್ಟೆಂಟ್ ಮತ್ತು ಕೆಥೊಲಿಕರಿಗೆ ಸೇರಿದ ಲೂತೆರಿನ್, ಬಾಪ್ಟಿಸ್ಟ್, ಕೆಥೊಲಿಕ್ ಎಂದು ಮೂರು ಚರ್ಚ್‌ಗಳನ್ನು ಏಪ್ರಿಲ್ 11ರ ಬೆಳಗಿನ ಜಾವ ಪುಡಿಗಟ್ಟಿವೆಈಶಾನ್ಯ ಭಾರತದ ಕ್ರಿಶ್ಚಿಯನ್ ಫೋರಂ ಒಕ್ಕೂಟವು ಶಾಂತಿ ಮತ್ತು ಸೌಹಾರ್ದ ಕಾಪಾಡುವಂತೆ ಕರೆ ನೀಡಿದೆ. ಕಾಲು ಶತಮಾನದಷ್ಟು ಹಿಂದೆ ಸರಕಾರಿ ಜಾಗದಲ್ಲಿ ಅನುಮತಿ ಪಡೆದು ಈ ಇಗರ್ಜಿಗಳನ್ನು ಕಟ್ಟಲಾಗಿತ್ತು. ಬಿಜೆಪಿ ಮೈತ್ರಿ ಸರಕಾರ ಬಂದಾಗ ಸರಕಾರಿ‌ ಜಾಗ ತೆರವು ಮಾಡುವಂತೆ ನೋಟೀಸು ನೀಡಿತ್ತು.

ಚರ್ಚ್‌ಗಳವರು ಕೋರ್ಟಿಗೆ ಹೋಗಿದ್ದರು. ಯಥಾಸ್ಥಿತಿ ಕಾಪಾಡುವ ಇತ್ಯಾದಿ ಎಳೆದಾಟದ ಬಳಿಕ ಮಣಿಪುರ ಹೈಕೋರ್ಟ್ ಪೀಠವು ಏಪ್ರಿಲ್ 4ರಂದು ಯಥಾಸ್ಥಿತಿ ತೆಗೆದಿತ್ತು. ದಿನಾಂಕ 11ರಂದು ಬಹುಶಾ ಗಲಾಟೆ ತಡೆಯಲು ಬೆಳ್ಳಂಬೆಳಿಗ್ಗೆ ಬುಲ್ಡೋಜರ್ ಬಳಸಿ ಮೂರು ಚರ್ಚ್‌ಗಳನ್ನು ಸರಕಾರ ಉರುಳಿಸಿದೆ ಎಂದು ಇಂಪಾಲ್ ಆರ್ಚಿಯಿಸೀಸ್‌ನ ಹಣಕಾಸು ನಿರ್ವಾಹಕ ಫಾದರ್ ಫ್ರಾನ್ಸಿಸ್ ವಿಯಾಲೊ ಹೇಳಿದ್ದಾರೆ.