ಕರ್ನಾಟಕದ ಎಲ್ಲ ಕಡೆ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮೊದಲ ದಿನವಾದ ಏಪ್ರಿಲ್ 13ರಂದು 221 ನಾಮಪತ್ರಗಳು ಸಲ್ಲಿಕೆ ಆಗಿವೆ. ಇದರಲ್ಲಿ 197 ಜನ ಪುರುಷರಾದರೆ, 24 ಮಂದಿ ಮಹಿಳೆಯರು.
ಬಿಜೆಪಿ 27, ಕಾಂಗ್ರೆಸ್ 26, ಜೆಡಿಎಸ್ 12, ಎಎಪಿ 10, ಬಿಎಸ್‌ಪಿ 1 ಮತ್ತು ಪಕ್ಷೇತರರು 45 ಎಂದು ಮೊದಲ ದಿನದ ನಾಮಪತ್ರ ಸಲ್ಲಿಕೆಗಳು. ಏಪ್ರಿಲ್ 20 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಚಿವ ಸುನಿಲ್ ಕುಮಾರ್ ಸಹಿತ 6 ಜನರು ನಾಮಪತ್ರ ಸಲ್ಲಿಸಿದ್ದು, ಉಡುಪಿಯಲ್ಲಿ 4, ದಕ್ಷಿಣ ಕನ್ನಡದಲ್ಲಿ 2 ನಾಮಪತ್ರ ಸಲ್ಲಿಕೆ ಆಗಿದೆ. ದಕದಲ್ಲಿ ಪಕ್ಷಗಳವರು ಯಾರಿಂದಲೂ ನಾಮಪತ್ರ ಸಲ್ಲಿಕೆ ಆಗಿಲ್ಲ.