ಆಫ್ರಿಕಾದಿಂದ ಚಲಿಸತೊಡಗಿದ ಕೊರೋನಾ ರೂಪಾಂತರಿ ವೈರಸ್ ಕಾಟದಿಂದ ಪಾರಾಗಲು  ಎಲ್ಲರಿಗೂ ಬೂಸ್ಟರ್ ಡೋಸ್ ಲಸಿಕೆ ತೆಗೆದುಕೊಳ್ಳುವಂತೆ ಬ್ರಿಟನ್, ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಆದೇಶಿಸಲಾಗಿದೆ.

ಬೆರಳೆಣಿಕೆಯಷ್ಟು ಮಾತ್ರ ಓಮಿಕ್ರಾನ್ ಅದೂ ಸೌಮ್ಯ ರೀತಿಯದು ಕಂಡು ಬಂದಿವೆ. ಆದರೆ ಎಲ್ಲ ಕಡೆ ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳುತ್ತಿದೆ. ಇದರ ನಡುವೆ ಭಾರತದಲ್ಲಿ ಅಧಿಕೃತವಾಗಿ ಓಮಿಕ್ರಾನ್ ರೂಪಾಂತರ ವೈರಸ್ ಅಧಿಕೃತವಾಗಿ ಪತ್ತೆಯಾಗಿಲ್ಲ. ಆದರೆ ಮುಂಬಯಿಗೆ ದಕ್ಷಿಣ ಆಫ್ರಿಕಾದಿಂದ ಬಂದ 1,000 ಜನರಲ್ಲೂ ಅರ್ಧಕ್ಕೂ ಹೆಚ್ಚು ಜನರ ಮಾಹಿತಿ ಆರೋಗ್ಯ ಇಲಾಖೆಗೆ ಲಭ್ಯವಾಗಿಲ್ಲದಿರುವುದು ಆತಂಕ  ತಂದಿದೆ.