ಮಂಗಳೂರು, ಏ 14: ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪದವಿ ಪೂರ್ವಕಾಲೇಜು ವತಿಯಿಂದ ಅಂಬೇಡ್ಕರರ 132ನೇ ಜಯಂತಿ ಕಾರ್ಯಕ್ರಮವನ್ನು ದಿನಾಂಕ 14.04.2023, ಪೂರ್ವಾಹ್ನ 08:45 ರಕ್ಕೆ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಚಂದ್ರಶೇಖರ ಪುತ್ತೂರು, ಸಂವಿತ್ ರಿಸರ್ಚ್ ಫೌಂಡೇಶನ್ ದ.ಕ. ಜಿಲ್ಲೆ ಸಂಯೋಜಕರು, ವಿದ್ಯಾ ಭಾರತಿ ಜಿಲ್ಲಾ ಯೋಗ ವಿಷಯ ಪ್ರಮುಖರು ನೆರವೇರಿಸಿದರು. ಇವರು ಮಾತನಾಡಿ ಅಂಬೇಡ್ಕರರ ಜೀವನದ ಸಾಧನೆಗಳು, ಅವರು ಜೀವನದಲ್ಲಿ ಅಳವಡಿಸಿಕೊಂಡಿದ್ದ ಧ್ಯೇಯೋದ್ದೇಶಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು. ಅಧ್ಯಾಪಕಿಯಾದ ಸ್ಮಿಶರವರು ದಿನದ ಮಹತ್ವವನ್ನು ವಿವರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆಯವರು ವಹಿಸಿದ್ದರು. ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.