ಭಾರತದ ಮಿಜೋರಾಂ ಗಡಿಯಾಚೆ ಜೀಕಾವರ್ ಮತ್ತು ರಿಕಾವ್ವರ್ ನಡುವೆ ಮ್ಯಾನ್ಮಾರ್ ಸೇನೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬರು ಸಾವಿಗೀಡಾಗಿದ್ದು, 20 ಜನರು ಗಾಯಗೊಂಡಿದ್ದಾರೆ.
ಸೇನೆ ನುಗ್ಗಿದ್ದರಿಂದ ಮ್ಯಾನ್ಮಾರ್ ನಾಗರಿಕರು ಮಿಜೋರಾಂ ಗಡಿಯೊಳಗೆ ನುಸುಳಿರುವುದಾಗಿ ಹೇಳಲಾಗಿದೆ. ಮಿಜೋರಾಂ ಗಡಿಯ 20 ಮಂದಿ ಗಾಯಗೊಂಡಿದ್ದು ಅವರನ್ನು ಮಿಜೋರಾಮಿನ ಚಿಂಪಾಯಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.