ಮಂಗಳೂರು: ಮಂಗಳೂರಿನ ಎ. ಜೆ. ಲೇಡೀಸ್ ಹಾಸ್ಟೆಲಿನ ಆರನೆಯ ಮಹಡಿಯಿಂದ ಎಂಬಿಬಿಎಸ್ ವಿದ್ಯಾರ್ಥಿನಿ ಒಬ್ಬರು ಕೆಳಕ್ಕೆ ಹಾರಿ ಪ್ರಾಣ ಕಳೆದುಕೊಂಡರು.

ಸಾವಿಗೀಡಾದ ತರುಣಿ 20ರ ಪ್ರಕೃತಿ ಶೆಟ್ಟಿ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿಯ ಕೋಣೆಯಲ್ಲಿ ಮರಣ ಪತ್ರ ದೊರೆತಿದ್ದು, ಕಿರುಕುಳಕ್ಕೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.