ಮಂಗಳೂರು: 1974 ರಲ್ಲಿ ಆರಂಭಗೊಂಡು ಈಗ ಸುವರ್ಣ ಮಹೋತ್ಸವದ ಆಚರಣೆಗೆ ಮೊದಲು ಸಂಸ್ಥಾಪಕ ಖಜಾಂಚಿ ಆದ ರಾಕ್ಣೊ ಮಾಜಿ ಸಂಪಾದಕ ಫಾ ಮಾರ್ಕ್ ವಾಲ್ಡರ್ ಅವರನ್ನು ಭೆಟಿಯಾಗಿ ಮನವಿ ಪತ್ರ ಬಿಡುಗಡೆ ಮಾಡಿಸಲಾಯಿತು.
ಹಿರಿಯರಾದ (88) ಫಾ ಮಾರ್ಕ್ ವಾಲ್ಡರ್ ಒಂದು ಸಾವಿರ ರೂಪಾಯಿಯ ಮೊದಲ ದೇಣಿಗೆ ನೀಡಿ ಮಾತನಾಡಿ, ಕರ್ನಾಟಕದ ಕೊಂಕಣಿ ಅಂದರೆ ಭಾಶಾ ಮಂಡಳ್ ಆಗಿದೆ. ಸುವರ್ಣ ಮಹೋತ್ಸವ ಸಾಧನೆ ಬಹಳ ಸಂತಸ ನೀಡುತ್ತದೆ ಎಂದರು.
ಮೊದಲಿಗೆ ಕಾರ್ಯದರ್ಶಿ ರೇಮಂಡ್ ಡಿಕೂನಾ ಸುವರ್ಣ ಮಹೋತ್ಸವದ ಬಗ್ಗೆ ಮಾಹಿತಿ ನೀಡಿ ಇದೊಂದು ಎಲ್ಲಾ ಧರ್ಮಗಳ ಜನರು ಮಾತನಾಡುವ ಭಾಷೆ ಆಗಿದೆ. ಜನರ ಸ್ಫಂದನೆ ಸೊಗಸಾಗಿದೆ ಎಂದರು. ಅಧ್ಯಕ್ಷ ಕೆ ವಸಂತ ರಾವ್ ಸ್ವಾಗತಿಸಿದರು.
ಉಪಾಧ್ಯಕ್ಷ ರತ್ನಾಕರ ಕುಡ್ವಾ, ಮಾಜಿ ಅಧ್ಯಕ್ಷ ವೆಂಕಟೇಶ ಬಾಳಿಗ, ಕಾರ್ಯಕಾರಿ ಸದಸ್ಯರಾದ ಲಾರೆನ್ಸ್ ಪಿಂಟೊ, ಕೊಂಕಣಿ ಅಭಿಮಾನಿ ಜೋನ್ ತಾವ್ರೊ ಹಾಜರಿದ್ದರು.