ಚೀನಾದ ಮೂವರು ಗಗನಯಾತ್ರಿಗಳು ಚೀನಾದ ಇನ್ನೂ ಮುಗಿದಿಲ್ಲದ ಬಾಹ್ಯಾಕಾಶ ನಿಲ್ದಾಣ ಟಿಯಾನ್ಹೆಯಲ್ಲಿ 90 ದಿನ ಇದ್ದು ಶುಕ್ರವಾರ ಹಿಂತಿರುಗಿದ್ದಾರೆ.

ನಿಯಾ ಹಯ್ಸಿಂಗ್, ಲಿನ್ ಬೊಮಿಂಗ್, ಟ್ಯಾಂಗ್ ಹಾಂಗ್ಬೊ ಶುಕ್ರವಾರ ಉತ್ತರ ಚೀನಾದ ಒಳ ಮಂಗೋಲಿಯಾದಲ್ಲಿ ನಿಯಮಿತ ಮರಿಗೆಯಲ್ಲಿ ಬಂದಿಳಿದರು. ಅವರು ಜೂನ್‌ನಲ್ಲಿ ಶೆನ್‌ಜವ್ 12 ಯೋಜನೆಯಂತೆ ಬಾಹ್ಯಾಕಾಶಕ್ಕೇರಿ ಆ ನಿಲ್ದಾಣವನ್ನು ಮತ್ತಷ್ಟು ಸಜ್ಜುಗೊಳಿಸಿದರು.

ಟಿಯಾನ್ಹೆ ಬಾಹ್ಯಾಕಾಶ ನಿಲ್ದಾಣವು 2022ಕ್ಕೆ ಮುಗಿಯಲಿದ್ದು ಅಕ್ಟೋಬರ್‌ನಲ್ಲಿ ಶೆನ್‌ಜವ್ 13ರಲ್ಲಿ ಗಗನಯಾನಿಗಳು ಹೋಗಿ ಮತ್ತೆ ಅದನ್ನು ಕಟ್ಟಲಿದ್ದಾರೆ. 90 ದಿನಗಳಲ್ಲಿ ಮೂವರು ಗಗನಯಾನಿಗಳು ಅಲ್ಲಿ ಬಾಹ್ಯಾಕಾಶ ನಡಿಗೆ, ಯಂತ್ರ ಕೈಗಳ ಪರಿಶೀಲನೆ ಮತ್ತು ಕಟ್ಟುಗೆ ಕೆಲಸ ನಡೆಸಿದರು.

ಟಿಯಾನ್ಹೆ ಬಾಹ್ಯಾಕಾಶ ನಿಲ್ದಾಣವು ಒಂದೂಕಾಲು ಬಸ್ಸಿನಷ್ಟು ದೊಡ್ಡದಿದೆ.

ಈಗಾಗಲೇ ಚೀನಾದ ರೋವರ್ ಮಂಗಳನಲ್ಲಿ ಇದೆ.