ಲೋಕ ಪ್ರಿಯ ಊಟ ತಿಂಡಿಗಳ ಸ್ಥಾನಮಾನ ಹೊರಬಿದ್ದಿದ್ದು ಭಾರತದ ತಿನಿಸೂಟಗಳು 5ನೇ ಸ್ಥಾನ ಪಡೆದಿವೆ. ಇಟೆಲಿಯು ಮೊದಲ ಸ್ಥಾನದಲ್ಲಿದೆ. ಎರಡು ಮತ್ತು ಮೂರನೆಯ ಸ್ಥಾನಗಳು ಕ್ರಮವಾಗಿ ಗ್ರೀಸ್ ಮತ್ತು ಸ್ಪೆಯಿನ್‌ಗೆ ಹೋಗಿವೆ.

ಜಗತ್ತಿನ ಎಲ್ಲ ಕಡೆ ಸಿಗುವ ಚೀನಾದ ತಿನಿಸೂಟಗಳು ಮಾತ್ರ 11ನೇ ಸ್ಥಾನ ಪಡೆದಿದೆ. ಬೆಂಗಳೂರಿನ ಕರಾವಳಿ, ಮುಂಬಯಿಯ ಥೇಕರ್, ದಿಲ್ಲಿಯ ಬುಕಾರ್ ದಮ್ ದಕ್ತ್, ಗುರು ಗ್ರಾಮದ ಕಮೋರಿನ್ ಎಂದು ಭಾರತದ 450 ಆಹಾರಾಲಯಗಳು ಅತ್ಯುತ್ತಮ ತಿನಿಸೂಟ ಹೊಂದಿರುವ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.