ಅಮೆರಿಕ ಸಂಯುಕ್ತ ಸಂಸ್ಥಾನದ 48 ರಾಜ್ಯಗಳಲ್ಲಿ ಚಳಿ ಮೈನಸ್ ಡಿಗ್ರಿಗೆ ಹೋಗಿದೆ. ಬಫೆಲೋ ನಗರ 8 ಅಡಿ ಎತ್ತರದ ಮಂಜಿನಲ್ಲಿ ಹೂತು ಹೋಗಿದೆ. ಯುಎಸ್‌ಎ ಪೂರ್ವ ಭಾಗದಲ್ಲಿ ಒಂದೇ ಸಮನೆ ಮಂಜು ಬೀಳುತ್ತಿದ್ದು ಜನರ ಬದುಕು ಕಷ್ಟಕ್ಕೆ ಸಿಲುಕಿದೆ. ಚಳಿಯಿಂದ ಸತ್ತವರ ಸಂಖ್ಯೆ 31ಕ್ಕೆ ಏರಿದೆ.
Image courtesy
ನ್ಯೂಯಾರ್ಕ್ ನಗರ ಮತ್ತು ಸುತ್ತಣ ಪ್ರದೇಶಗಳಲ್ಲಿ ತೀವ್ರ ಮಂಜು ಸುರಿಯಿಂದ ವಾಹನ ಸಂಚಾರ ಅಸಾಧ್ಯ ಎನಿಸಿದೆ ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೋಚುಲ್ ಹೇಳಿದ್ದಾರೆ. ನ್ಯೂಯಾರ್ಕ್‌ನ ಬಫಲೋ ನಗರ ಮಂಜು ಸಮಾಧಿಯಾಗಿದೆ. ಅಲ್ಲಿಯ ವಾಸಿಯಾದ ಕ್ಯಾಥಿ ಹೊಚುಲ್ ಅವರು ಬಫಲೋ ನಗರದಲ್ಲಿ 8 ಅಡಿ ಎತ್ತರಕ್ಕೆ ಮಂಜು ಬಿದ್ದಿದ್ದು ತೆಗೆಯುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.