ಲೋರೆಟ್ಟೊ ಮಾತಾ ಚರ್ಚ್ ನಲ್ಲಿ ಕ್ರಿಸ್ಮಸ್ ಸಂಭ್ರಮವನ್ನು ವಿಜ್ರಂಭನೆಯಿಂದ ಆಚರಿಸಲಾಯಿತು. ಸಾಯಂಕಾಲದ ಬಲಿಪುಜೆಯಲ್ಲಿ ನೂರಾರು ಭಕ್ತಾದಿಗಳು ಭಕ್ತಿಯಿಂದ ಯೇಸು ಕ್ರಿಸ್ತರ ಜನನವನ್ನು ಬಲಿಪುಜೆಯೊಂದಿಗೆ ಆಚರಿಸಿದರು. ಪ್ರಧಾನ ಧರ್ಮಗುರುಗಳಾಗಿ  ಲೊರೆಟ್ಟೊ ಅಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ವಂ. ಜೇಸನ್ ಮೋನಿಸ್, ಚರ್ಚ್ ಧರ್ಮಗುರುಗಳಾದ ವಂ.ಫ್ರಾನ್ಸಿಸ್ ಕ್ರಾಸ್ತಾ ,ವಂ. ಆನಿಲ್ ಫೆರ್ನಾಂಡಿಸ್‌ ,  ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳೊಂದಿಗೆ ಬಲಿಪೂಜೆಯನ್ನು ಅರ್ಪಿಸಿದರು.

ಕ್ರಿಸ್ಮಸ್ ಪ್ರಯುಕ್ತ ತಮ್ಮ ಸಂದೇಶದಲ್ಲಿ ಧರ್ಮಗುರುಗಳ ಪಾಪದಲ್ಲಿ ಮುಳುಗಿ ಹೋದ ಮನುಜ ಕುಲವನ್ನು ಪ್ರೀತಿಯಿಂದ ಅಪ್ಪಿಕೊಳ್ಳಲು ದೇವರು ರೂಪಿಸಿದ ಯೋಜನೆಯ ದೇವರ ಕುವರ ಏಸುಕ್ರಿಸ್ತರ ಜನನ ಈ ಹಬ್ಬವು ದೇವರ ಅಗಾಧ ಪ್ರೀತಿಯನ್ನು ಮನುಜ ಕುಲಕ್ಕೆ ತೋರಿಸುತ್ತದೆ ಪ್ರೀತಿಸುವ ಹೃದಯಗಳಲ್ಲಿ ಪ್ರೀತಿ ಪಾತ್ರ ಯೇಸುವಿನ ಜನನವಾಗುತ್ತದೆ  ಎಂದು  ತಮ್ಮ ಸಂದೇಶ ನೀಡಿದರು.

ಚರ್ಚ್ ಅವರಣದಲ್ಲಿ ಎಲ್ಇಡಿ ಪರದೆಯನ್ನು ಅಳವಡಿಸಲಾಗಿತ್ತು. ಸಂಬ್ರಮಕ್ಕೆ ಸಹಕರಿಸಿದ ಧಾನಿಗಳಿಗೆ ಗೌರವಪೂರ್ವಕ ವಾಗಿ ಅಲಂಕರಿಸಿದ ಮೇಣದ ಬತ್ತಿಗಳನ್ನು ವಿತರಿಸಲಾಯಿತು.

ಚರ್ಚ್ ನ್ನು ರಂಗು ರಂಗಿನ ವಿದ್ಯುದಿಪಾಲಂಕರದಿಂದ ಕಂಗೊಳಿಸಲಾಗಿತ್ತು. ಬಲಿ ಪೂಜೆಯ ಬಳಿಕ ಐಸಿವೈಮ್ ಸದಸ್ಯರು ಮನರಂಜನ ಕಾರ್ಯಕ್ರಮವನ್ನು ನೀಡಿದರು. ಏಸುಕ್ರಿಸ್ತರ ಜನ್ಮ ದಿನವನ್ನು ಸಾರುವ ಗೋದಲಿಯನ್ನು ಐಸಿವೈಮ್ ಸದಸ್ಯರು ನಿರ್ಮಿಸಿದರು. ಸಂಭ್ರಮದಲ್ಲಿ ಪಾಲ್ಗೊಂಡ ಎಲ್ಲಾ ಭಕ್ತಾದಿಗಳಿಗೆ ಕಾಫಿ ಹಾಗೂ ಕೇಕ್ ವಿತರಿಸಲಾಯಿತು. ಚರ್ಚ್ ಪಾಲನಾ ಮಂಡಳಿಯ ನೇತೃತ್ವದಲ್ಲಿ ಶಿಸ್ತುಬದ್ಧವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಧರ್ಮಗುರುಗಳು ಸಹಕರಿಸಿದ ಸರ್ವರರನ್ನು ವಂದಿಸಿದರು.