ಹೊಸ ರಾಗವೊಂದು ಕಾಡಲೆಂದು
ಈ ನಾಭಿಯಿಂದ ಉದಿಸಿದೆ
ಕೊರಳು ಹಾಯ್ವ ಮೊದಲೆ ಹಾರಿ
ನಿನ್ನ ಸನಿಹ ಬಯಸಿದೆ.........
ಎಲ್ಲೋ ಹುಟ್ಟಿ ಎಲ್ಲೋ ಬೆಳೆದ
ರಾಗಗಳಿಗೆ ನೀ ಅಧಿಪತಿ
ಈ ನವೀನ ರಾಗಕಾಗಿ ಮಿಡಿದು
ಹರಿಸು ಒಲವ ಸಮ್ಮತಿ.......
ಪದಗಳಷ್ಟೂ ಕುಣಿದು ನಲಿದು
ಮನವ ಭ್ರಮಣ ಗೊಳಿಸಲಿ
ಕಳೆದುಹೋದ ಮತಿಯು ಜಾರಿ
ಪ್ರೇಮದಂಗಳ ಸೇರಲಿ........
ಉದಯವಾದ ರಾಗ ಇಂದು
ಶಾಶ್ವತತೆಯ ಬಯಸಿದೆ
ನನ್ನಲಿರುವ ಮೋಹ ಕಳೆದು
ನಿನ್ನ ಸೇರಲು ಹವಣಿಸಿದೆ.......
ಜೀವಪರಿ