ಬುವಿಗೆ ಚಪ್ಪರ ವಾಗಿ
ಖಗಕೆ ಹೆದ್ದಾರಿ
ಸವಿಗೆ ತಾರೆಯ ಮಿನುಗು
ಮೊಗಕೆ ಬೆಳಕಾಗಿ
ಕವಿಗೆ ಭಾವದ ಮಿಂಚು
ನಗುವ ಹೂವಾಗಿ
ರವಿಗೆ ಸಾಮ್ರಾಜ್ಯದಲಿ
ಹೊಗುವ ನೆಲೆಯಾಗಿ
ಮೇಘರಾಜನ ಬೊಬ್ಬೆ
ಇರುವ ಕಡಲಾಗಿ
ಓಘ ತುಂಬಿದ ನಾದ
ತರುವ ಸಿಡಿಲಾಗಿ
ಆಕಾಶವೇ ಹಾಗೆ
ಬಹು ದೊಡ್ಡ ಟೊಳ್ಳು
ಸಾಕಾರ ಗೊಳಿಪಂತೆ
ಇಹುದಲ್ಲ ಗುಲ್ಲು.
- ಡಾ ಸುರೇಶ ನೆಗಳಗುಳಿ