ದೀಪವಾರಿ ಕತ್ತಲಾಗುವ ಮುನ್ನ
ಉರಿದ ಹಣತೆಯ ಬೆಳಕಲಿ
ಪುಟ್ಟದಾದ ಕಿರಣವೊಂದು
ಬಣ್ಣಕಟ್ಟಿದೆ ಮನದ ಗೂಡಲಿ.....
ಮಾನವೀಯತೆ ಸೆಲೆಯು ಬತ್ತಿದೆ
ಹಿರಿತನದ ನಯನದಂಚಲಿ
ಕಾಲಚಕ್ರವದು ನಡೆದಿದೆ ನಿರಂತರ
ಹೊಸ ಮುಗ್ದತೆಯ ಮಿಂಚಲಿ.....
ಕೊಡದೆ ಕಾಪಿಟ್ಟುಕಾಡುವವರ ಮಧ್ಯೆ
ದೇಹಿ ಭಾವದ ದಾಹ ಬೆಳೆದಿದೆ
ಇವರಲಂತೂ ಬೊಗಸೆ ಕರಗಿದರೂ
ಮನದ ತುಂಬಾ ಒಲವಿದೆ.....
ಎಲ್ಲ ಬಲ್ಲವ ತಾನೆ ಎಂಬುದ
ಅರಿತ ಮನವದು ಕಮರಿದೆ
ಅಜ್ಞಾನಿಯೆಂಬ ಬಾಲಿಶದಲೇ
ಜ್ಞಾನ ಬೆಳಗುತ ಸಾಗಿದೆ........
-ಜೀವಪರಿ