ಸೆಂಟ್ ಮೇರಿಸ್ ಐಲ್ಯಾಂಡ...

ಸ್ವರ್ಗದ ಸೂಬಗನ್ನು...ಸೂರೆ ಗೊಳ್ಳುವ ....

ಸುಂದರ ವಿಹಂಗಮ ನೋಟ....


ಬರಿ ಕಡಲಲ್ಲವದು  ನೊರೆ ಹಾಲ್ಗಡಲು.....

ನೌಕಾಯನ ವಿಹಾರವು .......

ನಯನ ಮನೋಹರವು.....


ಉತ್ಸವದಲಿ ಸಾಗಿ ಬರುವ ತೇರಿನಂತೆ ವೈಯಾರದೀ....

ತೇಲಿ ಬರೋ ಜಂಭದ ಜಹಜುಗಳು...

ಬಾನ ಬಣ್ಣವು ಕಡಲಿಗೊ ಕಡಲ ಬಣ್ಣವು ಬಾನಿಗೊ..


ಕಣ್ಮನ ಸೆಳೆಯುವ ತಾಣದ ಗುಣವದು...

ಕಡಲ ಬೈತಲೆ ಬೋಟ್ಟಿನಂತೆ...

ಪುಕ್ಕ ಕೆದರಿದ ಹಕ್ಕಿ ಯಂತೆ ...


ರೊಕ್ಕ ಕೊಟ್ಟರೆ ಹಾರಲಂತೆ...

ಪೇರಿ ಹೊಡಿಸುವ ಪ್ಯಾರಾಚುಟ್ಗಳು...

ಹಂಸ ನಡೆಯ ಬೆಡಗಿನವರ ನೀರೇರಚಾಟ...


ಮೀನಿನಂತೆ ಈಜು ಹೊಡೆವ ಹುಡುಗರಾಟ...

ಹುರಿದರಳಿನಂತೆ ಮರಳು ....

ಕೆರಳಿ ಅಲ್ಲಿ ಬಿಸಿಲು...



ತೂರಿ ಕೊಂಡು ಹಾರುವಾಗ ...

ತೆರೆಯು ತಂದು ಎಸೆಯಿತಲ್ಲಾ ...

ನಮ್ಮನೊಂದು ತೀರ....

ರಚನೆ:- ಪ್ರೀತಿ ಮಾಂತೇಶ ಬನ್ನೇಟ್ಟಿ

ವಿಜಯಪುರ ಜಿಲ್ಲೆ..