ಚುಕ್ಕಿ ಚಂದ್ರನ ಬಳಗ ...

ನಟ್ಟೀರೂಳು ರಾತ್ರಿಯೋಳಗ ....


ಸುಂದರ ಸ್ವಪ್ನಗಳನು ಹೊತ್ತು ...

ನಯನದ ಮುಂಬಾಗಿಲಿನಲಿ ನಿಂದು ...


ನಸುನಗುವನು ಬೀರೊ ..

ಹುಸಿ ಮುನಿಸಿನ ಮನಕೆ ..


ಚೆಲ್ಲಿದ ಬೆಳದಿಂಗಳ ಬಾಚಿ ತಬ್ಬುತಲೊಂದು ..

ಕೋಮಲ ಕೆನ್ನೆಯ ಮೇಲೆ ...


ಚುಂಬಿಸಿ ಮುತ್ತಿನ ಸ್ಪರ್ಶ ...

ಬೆಚ್ಚನೆ ಇರೂಳಿಗೆ ಭರಿಸಿ ....


ಸುಖಿಸಲು ಸುಮ್ಮನೇ ಬಿಟ್ಟು ...

ನಾಚುತ ಮೊಡದಿ ಅಡಗಲಿ  ..


ಚಂದ್ರ ಇರುಳಲಿ ಹರಸಲಿ ತಾ ಹೋಂಗನಸಿಗೆ ...

ಜಾರುತ ಸೇರಲಿ ಮತ್ತೇ ಮುಗಿಲೋಳು ...


ಕನಸನು ಬಿತ್ತಲು ನಮಗೆ ಅನುದಿನವೂ ...

ಶುಭ ರಾತ್ರಿ...ಸಿಹಿ ಕನಸು ನಿಮಗಾಗಿ...

ರಚನೆ:- ಪ್ರೀತಿ ಮಾಂತೇಶ ಬನ್ನೇಟ್ಟಿ

ವಿಜಯಪುರ ಜಿಲ್ಲೆ..