ನೋಡು ನಡಿ ಕಂದ...

ದಕ್ಷಿಣ ಕನ್ನಡ ಜಿಲ್ಲೆಯೊಂದ...

ಕೇಳಿ ನಲಿ ಕಂದ,ತುಳು,ಕೊಂಕಣಿ,ಬ್ಯಾರಿ,.ಭಾಷೆಗಳಂದ.

ಮೂಡಣಕ್ಕೆ ಸಹ್ಯಾದ್ರಿ,....

ಪಡುವಣಕ್ಕೆ ಕಡಲ ತಡಿ....

ಬಂದು ನೀಲ್ಲೊಹಡಗು,ದೋಣಿಗೆ..


ಇಲ್ಲಿದೆ ಬಂದರು,ನೋಡು ನಡಿ ಕಂದ....

ಅದುವೇ,ನವಮಂಗಳೂರೊಂದ..

ತುಂಬಿ ಹರಿವ ನದಿಗಳಿವು...

ಗುರುಪುರ,ಪಯಸ್ವಿನಿ,ಕುಮಾರಧಾರೆ ಕಲರವ,

ನಿತ್ಯ ಹರಿವ ನೇತ್ರೆಗೆ,.ಕಟ್ಟಿದೆ ಆಣೆಕಟ್ಟು,.

ಅದುವೇ ನೋಡು ಕಂದ,.ತುಂಬೆ ಆಣೆಕಟ್ಟೊಂದ......



ನ್ಯಾಯ,ಸಮತೆ,ನಿತ್ಯ ಸತ್ಯ,

ಉಳಿದಿದೆ ಈ ನೆಲೆಯಲಿ...

ಧರ್ಮದ ನೆಲೆವೀಡಲಿ,.....

ಅದುವೇ ನೋಡು ಕಂದ....

ಪುಣ್ಯ ಕ್ಷೇತ್ರ ಧರ್ಮಸ್ಥಳದ,

ಶ್ರೀ ಮಂಜುನಾಥ ದೇವರ ಸ್ಥಳವೊಂದ...


ಫಲ ಪುಷ್ಪ ನೀಡುತಾ ...

ಪೂಜಿಸಿ ಆರಾಧಿಸಿ ದೋಷ ಮುಕ್ತರಾಗುತಾ...

ಸಂತಾನ ಪ್ರಾಪ್ತಿ ವರವ ಕೇಳುತಾ...

ಅದುವೇ ನೋಡು ಕಂದ....

ಶ್ರೀ ದೇವರ ಸ್ಥಳವದು ...  

ಶ್ರೀ ಕುಕ್ಕೆ ಸುಬ್ರಹ್ಮಣ್ಯವೊಂದ..



ದೇಶ ಸುತ್ತಿ ನೋಡುತ..

ಕೋಶ ಓದಿ ತಿಳಿಯುತ...

ಪದ್ಯ ಬರೆಯೋ ಕಂದ...

ಕವಿಶಿಷ್ಯ ನಾಮದವರು...

ಪಂಜೆ ಮಂಗೇಶರಂತೆ..

ನೀನು ಕನ್ನಡದಲ್ಲೊಂದ...

ರಚನೆ:-ಪ್ರೀತಿ ಮಾಂತೇಶ ಬನ್ನೇಟ್ಟಿ.

ವಿಜಯಪುರ ಜಿಲ್ಲೆ