ಶ್ರೀ ಕೃಷ್ಣ

ಶ್ರಾವಣ ಮಾಸದ ಅಷ್ಟಮಿ ದಿವಸ ..

ರೋಹಿಣಿ ನಕ್ಷತ್ರದಲಿ..

ಶ್ರೀ ಕೃಷ್ಣನು ಜನಿಸಿದನಮ್ಮಾ..

ಶ್ರೀ ಕೃಷ್ಣನು ಜನಿಸಿದನಮ್ಮಾ..


ದೇವಕಿ ಸುತನಾಗಿ ...

ಕಂದ ವಸು ದೇವನ ಮಗನಾಗಿ..

ಕಂದನ ಕಂಡ ಮನಕಾನಂದ..

ಕೋಟಿ ಸೂರ್ಯನ ಪ್ರಭೆಯು ಅಂದರು..


ಕಂಸನ ಕ್ರೌರ್ಯವ ತಡೆಯಲು ಮುಂದು..

ಕಂದನ ಉಳಿಸಲು ಅಂದು..

ನಂದ ಗೋಕುಲ ವನದಲ್ಲಿ ..

ನಂದ ಗೋಪನ ಮನೆಯಲ್ಲಿ..


ವಸುದೇವ ಕಂದನ ಹೊತ್ತನು ಶಿರದಲಿ..

ಯಮುನೇಯು ಸಾಗುವ ದಾರಿಯಲಿ..

ಕಂದನ ನೆನೆಯಲು ಮನದಲ್ಲಿ..

ಕಂಬನಿ ಹರಿದವು ಕವಲಾಗಿ..


ಕಾರ್ಗತ್ತಲೆ ಕಾಳ ರಾತ್ರಿಯೂ..

ಅಬ್ಬರಿಸುವಾ ಮೋಡಗಳು..

ಬೋರ್ಗರೆಯುವಾ ಮಳೆಯಲ್ಲಿ..

ಕೋಲ್ಮಿಂಚಿನಾ ಬೆಳಕಲ್ಲಿ..


ಆಧಿಶೇಷನೇ ಛತ್ರಿ ಚಾಮರ..

ಮುದ್ದು ಕೂಸೀನಾ ಮೇಲಲ್ಲಿ..

ವಸುದೇವ, ಶ್ರೀ ಕೃಷ್ಣನ ಒಪ್ಪಿಸಿ ನಡೆದನು..

ಯಶೋದೆಯ ಮಡಿಲಿನಲಿ ..


ರಚನೆ :- ಪ್ರೀತಿಮಾಂತಗೌಡಬನ್ನೇಟ್ಟಿ

ವಿಜಯಪುರ ಜಿಲ್ಲೆ