ನೀ
ಚಂದ ನೀ ಬಲು ಚಂದ ...
ಚಂದ್ರಾಮೇನ್ ನಿನ್ನಮುಂದಾ...
ಹಾಲ್ ಬೆಳದಿಂಗಳಿನಂದ..
ನಿನ್ನ ಮಾರಿ ಮ್ಯಾಲಿಂದ ...
ಕಣ್ಣೋಟದಲೇನಂದ...
ಕಡು ಕಪ್ಪನೇ ಹುಬ್ಬುಗಳಿಂದ..
ನಿನ್ನ ಕಣ್ಣಂಚಿನ ಹೊಳಪಿಂದ ...
ಚಂದ್ರ ಬೆಳಕನು ಕಂಡ..
ಇಡೀ ಚೆಲುವೇಲ್ಲವು,ಇಲ್ಲಿಂದ..
ಕುಡಿ ಮೀಸೆಯ ಮರೆಯಿಂದ..
ನೀ ನಸು ನಕ್ಕರೇ, ಯೇನಂದ..
ಮುತ್ತುಗಳ ಸಾಲಂದ..
ಕೆಂದಾವರೆ ಸೊಬಗೆಲ್ಲವು..
ನಿನ್ನ ಕೆಂಗಧಿರಂಚಿಂದ....
ನೀ ಮುಗುಳ್ ನಕ್ಕರೇ ,ಯೇನಂದ...
ಮೀನು,ಮೀನುಗಿ ,ಮೇಲಿಂದ..
ಮುಗಿಲಿಗೆ ಮುತ್ತಿಡುತಾವು..
ನಕ್ಷತ್ರಗಳ ಹಿಂಡೊಂದ..
ಸ್ಪಟಿಕ ಶಿಲೆಯದು ಸಾಲ ಪಡೆದಿದೆ..
ನಿನ್ನ ಬೆರಳ ಮೇಲ್ ತುದಿಯುಗುರಲಿ..
ಮುಡಿಯನೇರಿಹೇನೆಂಬ ಜಂಭದ..
ಕೋಮಲಾಂಗಿಯ ಕೆನ್ನೆಮೇಲಿನ..
ಮುಂಗುರುಳದು ನಾಚಿನಿಂದಿದೇ..
ನಿನ್ನ ಕೇಶರಾಶಿಯ ಕಾಂತಿಗೇ..
ಮರುಳಾದಂತಿದೆ ,ನೀರ್ಗಲ್ಲ ಹಿಮರಾಶಿ..
ಕರಗಿ ಹರಿಯುತಿದೆ ನಾಚಿ ನೀರಾಗಿ...
ನಿನ್ನ ಚೆಲುವಿನ ಮುಂದೆ ಗಿರಿಶಿಖರಗಳು..
ಮುಖ ತೋರಲು ,ಹಿಂಜರಿಯುತ್ತಿವೇ..
ಮಾಂಜಿನಾ ಮರೆಯ ಮುಸುಕಲ್ಲಿ ..
ಅವಿತಂತಿದೆ ಶರತ್ಕಾಲದ ಸೆರಗ ಹೊದ್ದಲ್ಲಿ..
ಕಂಡೊಡನೇ ನೀ ....
ಕಳೆದು ಕೊಂಡಿವೇಯಲ್ಲ...
ಕಣ್ ತಪ್ಪಿ ಕಡವೆಗಳ ಹಿಂಡು...
ಕಣಿವೆಗಳ ಕವಲು ದಾರಿಯ..
ಹಿಡಿದಿವೆಯಲ್ಲ,ಅವುಗಳ..
ಕಣ್ ತುಂಬಿದ ಬಿಂಬ ನೀ..
ಮನ ಸೋಲದವರಿಲ್ಲ ,ಅಗೋ
ಅವಳು ನರ್ತಿಸುತಿಹಳಲ್ಲಾ..
ಊರ ಬಾಲೆಯರು, ಯಾವ ಲೆಕ್ಕ..
ಉಸಿರು ಬಿಗಿಹಿಡಿದು ...
ಆ ಬೇಲೂರಿನ ಶಿಲಾಬಾಲೆ ..
ಬೇಕೆಂದು ನೀ....
ರಚನೆ:-ಪ್ರೀತಿ.ಮಾಂತೇಶ.ಬನ್ನೇಟ್ಟಿ
ವಿಜಯಪುರ ಜಿಲ್ಲೆ