ಹತ್ತಾರು ಊರುಗಳ ಸುತ್ತಿ,
ತಕ್ಕಂತ ಸಂಭಂದವ ಮೆಚ್ಚಿ..
ಇಚ್ಚೇಯನರಿತು ಬಾಳಿರೆಂದು ಮದುವೆಯಲಿ
ಹರಸಿ ಹಾರೈಸಿದರು ಹಿರಿಯರು ಬಂದು....
ಪಂಚಭೂತಾಗ್ನಿಗಳ ಸಾಕ್ಷಿಯಾಗಿ ...
ಬಾಳಿನ ಏಳು ಬೀಳಿನಲೂ ಸರ್ವಸಮನಾಗಿ
ಬಾಳುವೆವು ಹಿತವಾಗಿ ಏಳೇಳು ಜನ್ಮದಲೂ ...
ಸತಿ ಪತಿಗಳೊಂದಾಗಿ ಯನುತ ಚಂದದ ಭಾಷೆ ಕೊಟ್ಟವರು
ಕಣ್ಣಂಚಲ್ಲಿ ಕಾಜಲ್ ಕೆನ್ನೇಯಮೇಲೆ ರೊಜ್...
ಮುಂಗುರುಳು ,ಮುಖದಲ್ಲಿ ಮಂದಹಾಸ ...
ಒಂದೆ ಬಾರಿ ಕಂಡರು ಸುಂದರ
ಸಂಸಾರದ ಮನೆಯೊಡತಿ ...
ಕರ ಕೋಮಲ, ಕಣ್ಣರಳಿಸಿ
ತುಟಿ ಅಂಚಲಿ ನಸು ಗೆಂಪಿನ ..
ಕೆನ್ನೇಯಲಿ ತುಸು ಗುಳಿಬೀರುತ ..
ಹೊಸತನದ ಭರದಲಿ,ಹಸನ್ಮುಖಿಯೇ ಅವಳು ..
ಹಾಗೊಮ್ಮೆ ನೋಡಲು ,ಕೆನ್ನೆಯ ರೋಜ್ ಕಣ್ಣೇರಿ ಕುಳಿತಿತ್ತು ...
ಕಣ್ಣಿನಾ ಕಾಜಲ್ ಕೆನ್ನೆಯಾವರಿಸಿತ್ತು ...
ಅಲ್ಲಲ್ಲಿ ಗುಸು ಗುಸು ಪಿಸು ಪಿಸು ...
ಗಂಟೆಗಟ್ಟಲೆ ಅರಚಿದರು,ಕಿರುಚಿದರು
ಮುಗಿಯದ ರಾದ್ಧಾಂತ.....
ವಾಟ್ಸಪ್ಪು,ಫೇಸ್ಬೂಕ್ಕೂ ,ಇನ್ಸ್ಟಾ ಗ್ರಾಮ್.
ಡೌನ್ಲೋಡ್,ಅಪ್ಲೋಡ್,ಅವಾಂತರ..
ಸಂಶಯದ ಹುಳು ಹುಟ್ಟಿ ,ಸಂಭಂದಗಳನ್ನುಅಟ್ಟಿ .....
ಕಲ್ಯಾಣ ಇಲಾಖೆ ಸಾಂತ್ವನ ಕೇಂದ್ರಕ್ಕೆ,ಬಂದಾಯ್ತೇ
ಸಾವಿರ ಜನಸೇರಿ ಒಗ್ಗಟ್ಟಿನಲ್ಲಿ ಗಟ್ಟಿಮೇಳವ ಮಾಡಿಸಿದ್ದು .
ಆ ಕಟ್ಟೆ ,ಇ ಕಟ್ಟೇ ,ಪಂಚಾಯತಿ
ಆಮೇಲೆ ಕೊನೆ ಕೊನೆಗೆ ಕಟಕಟೆ ..
ಗಂಡನದು ,ದೂರೇನೆಂದೂ ಕೇಳಲು..
ಅವಳಲ್ಲಿ ಪತಿಗೆ ,ಕೊಡಲು ಸಮಯವಿಲ್ಲ ...
ಫೋನಿಗೂ ,ಅವಳಿಗೂ ಬಿಡುವಿಲ್ಲ...
ಕಂಡವರೊಂದಿಗೆ ಹಾಳು ಹರಟೆಯ ಮಲ್ಲಿ ನನಗೆ ಬೇಕಿಲ್ಲ...
ಹೆಂಡತಿ ಗಂಡನೆಂದ ಮಾತ್ರಕ್ಕೆ ಮನುಷತ್ವ ಮರೆತರೆ
ಹೆತ್ತವರ ತೊರೆದೂ ನಂಬಿಗೆಯನಿರಿಸಿ ...
ನಂಟನು,ಮೂರು ಗಂಟನು ಗೌರವಿಸಿ ಬಂದವಳು..
ಒಂಟಿಯಾಗದ ಹಾಗೇ ನೋಡಿದರೇ ..?ಕೇಳಿ ..
ಕದ್ದು ಆಲಿಸುವುದೇಕೆ..?,ಕಾಲ್ ಲಿಸ್ಟ್ ನೊಡೂವುದೇಕೆ..?
ಮೆಸೇಜ್ಗೆ, ಮಾತು, ಮೂಖ ,ಮೂತಿ ಒರಟೇಕೆ...?
ಭಾವನೆಗೆ ಬೆಲೆಯಿಲ್ಲ ನಾನೊಂದು ಜೀವವೆಂಬೂದು
ಅರಿವಿಲ್ಲದಂತೆ ನೋಯಿಸಿದರೆ,ನಿಂದಿಸಿದರೆ,ಹೇಗಿರಲಿ..?
ಪತಿ ಸಮಯವಲ್ಲದ ಸಮಯ ಯಾರವರು..ಮಾತೇನು?
ಪತ್ನಿ ಸಮಯ,ವ್ಯಕ್ತಿ,ಕೇವಲ ಕಾರಣವಲ್ಲ
ಮಾತಿನ ವಿಷಯ ಮಾರಕವೊ ..ಪೂರಕವೊ...
ವರ್ತನೆ,..ಹೊಂದಿರುವ ಸಂಭಂದ ಕಾರಣವಸ್ಟೇ ಎಂದಳವಳು..
ಹೇಳುವ ಪರಿಹಾರವಾದರೂ ಏನು?
ಅನಗತ್ಯಕ್ಕಿಂತ,ಅಗತ್ಯವಿದ್ದಲ್ಲಿ ಮಿತವಾಗಿ ಮೊಬೈಲ್ ಬಳಸಿ
ಎನ್ನುವ ,ಸಲಹೆಯನು ತಳ್ಳಿ ಪತಿರಾಯ ಎದ್ದು ನಿಂತನಲ್ಲಿ
ಹೆಂಡತಿಗೆ ಮೊಬೈಲ್ ಇರುವುದಾದರೇ,ಹೆಂಡತಿಯೇ ಬೇಡವೆಂದ
ಪ್ರಜ್ಞಾವಂತರನು.ಅವರ ಭಾವನೆ ಜೀವನವನ್ನು ,
ಹಾಳು ಗೆಡವಲು ,..ಅವರನ್ನು ಆಳಬಲ್ಲೂದಾಯ್ತೇ
ಪ್ರಜ್ಞಾವಂತರೇ ಆದಲ್ಲಿ ಅದನ್ನೇ ಗುರಿಯಾಗಿಸಿ ಕೊಂಡು ಜೀವನದ ಹಾದಿ ಬದಲಿಸ ಹೊರಟರೆ ಇದರಲ್ಲಿ ಅಪರಾಧಿ ಯಾರು...?
(ಪತಿ,....ಪತ್ನಿ...ಮೊಬೈಲ್)
ರಚನೆ:-ಪ್ರೀತಿ.ಮಾಂತೇಶ.ಬನ್ನೇಟ್ಟಿ.
ವಿಜಯಪುರ ಜಿಲ್ಲೆ .