ಯಾರಯ್ಯ ದೊಡ್ಡವನು

ಗುಡಿ ಲಿಂಗದಲಿ ಶಿವನೋ ?

ಆತ್ಮದಲಿ ದೇವಸದಾಶಿವನೋ !

ಕಿಚ್ಚು  ಯಾವುದು ಹೆಚ್ಚು

ಅಂತರಂಗದ ಬೆಳಕೋ

ದೇವಸ್ಥಾನದ ಛಳಕೋ !


ಕಲ್ಲಲ್ಲಿ ನೆಲೆಸಿರುವ

ಶಿವಗೆಷ್ಟು ಶಕ್ತಿ !

ಮನವೇ ಕಲ್ಲಾದಲ್ಲಿ

ಮತ್ತೆಲ್ಲಿ ಮುಕ್ತಿ ?


ಇರುಳೆಲ್ಲ ಜಾಗರಣೆ

ಉಪವಾಸ ಭಜನೆ !

ಅಂತರದ ಕತ್ತಲೆಗೆ

ಬಕುತಿಯೇ ಎಣ್ಣೆ !


ಜ್ಞಾನವೆಬುದೇ ಬತ್ತಿ

ಮಂತ್ರ ಭಜನೆಯ ಶಕ್ತಿ!

ಜಿಜ್ಞಾಸೆ  ದೀಪವೇ

ದಿವ್ಯ ಜ್ಯೋತಿ !


ದೇಹದಾ ಗುಡಿಯಲ್ಲಿ

ಆತ್ಮಲಿಂಗವ ಇರಿಸಿ

ಗರ್ಭಗುಡಿಯಲ್ಲಿ ಪರಶಿವಗೆ ನಮಿಸಿ !

ಧರ್ಮ ಕಾರ್ಯವ ಮಾಡಿ

ಧರೆಯಲ್ಲಿ ಇದ್ದವಗೆ

ಈ ಲೋಕ ಶಿವಲೋಕ !

ಇದುವೇ ಮುಕ್ತಿ!

Dr. Abraje Keshava Bhat