ಕಡಲ ತೀರಕೆ ಹೋದೆ
ಕಳೆಯಲಿದೆ ಮನೆಯ ಮಾಲಿನ್ಯ !
ನನಗೆ ನಾ ಅರಿಯದೇ
ನನ್ಮನದ ಮಲೀನ !
ಇಂಪಾದ ಗಾಳಿ
ವಿಶಾಲ ಕಡಲು !
ನೆಮ್ಮದಿಯ ಹುಡುಕಿ
ಬಂದವರು ಹಲರು !
ಕಟ್ಟೊಂದು ಕೈಯಲ್ಲಿ
ತ್ಯಾಜ್ಯ ಇದೆ ಅದರಲ್ಲಿ !
ಅಲ್ಲಿಯೇ ಅದು ಬಿಟ್ಟು
ನಾನು ಹೊರಟೇ !
ಕರೆದ ಮೊರೆಯನು ಕೇಳಿ ,
ಕಡಲು ಕೈಬೀಸಿ !
ಹಿಂತಿರುಗಿ ನಾನೊಡೆ
ಒಳಗೊಳಗೇ ನುಡಿ ಎನಗೆ !
ಸಂಕುಚಿತ ಮನ ನಿನಗೆ
ಸಾಗರದ ವಿಶಾಲತೆಯೋ !
ತೆರೆ ಎದ್ದು ಹೇಳುತಿದೆ
"ನೀನೆ ತ್ಯಾಜ್ಯ ,ಮಲಿನ ,
ನಾ ನೋಡು ಅವನಲ್ಲಿ ಲೀನಾ
ಕ್ಷೀರ ಸಾಗರ ಶಯನ !"
Dr. Abraje Keshava Bhat