ಬಾನು ಬಾಗಿದೆ ಕೊನೆಯಲ್ಲಿ
ಅಲ್ಲಯೇ ಮುಗಿಯಲು ಅಲ್ಲ
ಮನದಿ ಅಳುಕು ಬಿಟ್ಟಲ್ಲಿ
ಅವಕಾಶಗಳು ಇದೆಯಲ್ಲಾ.
ಕಾನನದ ದಾರಿಯಲ್ಲಿ ನಡೆದರೂ
ಮರಳಲು ಇದೆ ಅವಕಾಶ
ಠಕ್ಕರ ಜೊತೆಯಲ್ಲಿ ನಡೆದರೂ
ತಿಳಿದು ಹಿಂದಿರುಗು ಸವಕಾಶ.
ತಿಳಿಯದೇ ವಿಷವನ್ನು ಸೇವಿಸಿದೊಡೆ
ತೊಳೆದು ತೆಗೆದು ಹಾಕಿ
ಜೀವಿಸಲು ಅವಕಾಶ ಒಂದೆಡೆ
ಉಳಿದ ಜೀವನ ಬಾಕಿ.
ಕೊನೆಯೇ ಆರಂಭ ಎಲ್ಲಾ
ವಿಶ್ವಾಸ ಇದ್ದರೆ ಕೊರಡೂ ಕೊನರುವುದು
ನಾವು ಒಳಗೇ ಕೊರಗುವುದಲ್ಲ
ಹಠದಿ ಎದ್ದು ನಡೆಯುವುದು.
ರೇಮಂಡ್ ಡಿಕೂನ
*ಸ್ನೇಹ ಸಂಗಮ ಬಳಗದ* *ಪ್ರೀತಿಯ ಕವಿ ಬಂಧುಗಳಿಗೆ* *ಹೃದಯಪೂರ್ವಕ ನಮಸ್ಕಾರ*
*ನಿಮ್ಮ ಕವಿತೆಯ ಬಗ್ಗೆ ನನ್ನ *ಮನದ ಮಾತು*
🪂🪂🪂🪂🪂🪂🪂🪂🪂
*ರೇಮಂಡ್ ಅವರ ಕವನ ಒಂದು ಆಹ್ಲಾದಕರ ಅನುಭವವನ್ನು ನೀಡುವುದು ನಿಜ*
*ಜೀವನ ಎಂಬುದು ಹಾಗೆ ಎಷ್ಟೋ ಜನ ತಮ್ಮ ಕೈಯಲ್ಲಿ ಏನೂ ಆಗುವುದಿಲ್ಲ ಎಂಬ ಕೊರಗಿನಲ್ಲಿ ಇಡೀ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಾರೆ ಅಂಥವರನ್ನು ನೋಡಿ ರಚಿಸಿರುವ ಅಂತವರಿಗೆ ಆತ್ಮವಿಶ್ವಾಸ ತುಂಬಿಸುವ ಕವನ ತುಂಬಾ ಸುಂದರವಾಗಿ ಮೂಡಿ ಬಂದಿದೆ*
*ಕಾಡಿಗೂ ಕಾಡಿನ ಮಧ್ಯದಲ್ಲಿ ಸಿಲುಕಿದರೂ ಕೂಡ ಹೊರಬರುವ ಹಾದಿ ಖಂಡಿತಾ ಇದೆ ಕಳ್ಳರ ಮಧ್ಯೆ ಸಿಕ್ಕರೂ ಕೂಡ ಬದುಕುವ ಅವಕಾಶ ಹಾಗಿದೆ ಎನ್ನುವ ಸೊಗಸಾಗಿದೆ*
*ವಿಶವನ್ನು ಕುಡಿದರೂ ಕೂಡ ಅದನ್ನು ತೊಳೆದು ಬದುಕಿಸುವ ವಿಜ್ಞಾನ ನಮ್ಮಲ್ಲಿದೆ ಆತ್ಮವಿಶ್ವಾಸವೇ ಮುಖ್ಯ ಬದುಕಿನಲ್ಲಿ ಏನು ಬೇಕಾದರೂ ಸಾಧಿಸುವೆ ಎನ್ನುವ ಛಲ ನಿಮ್ಮಲ್ಲಿ ಇದ್ದರೆ ನಾವು ಏನಾದರೂ ಆಗಬಹುದು ಏನಾದರೂ ಸಾಧಿಸಬಹುದು ಎನ್ನುವ ಸಾರಾಂಶ ಹೊಂದುವ ನೇಮಕವನ್ನು ತುಂಬಾ ಉತ್ತಮವಾಗಿ ಮೂಡಿ ಬಂದಿದೆ*
*ಬಳಗದ ಭರವಸೆಯ ಕವಿ ನೀವು ಶುಭವಾಗಲಿ ನಿಮ್ಮ ಬರವಣಿಗೆ ಪರ್ವಕ್ಕೆ*
ತುರುವೇಕೆರೆ ತುಂಟ
[ಕೊನೆಯೇ?
*ನನ್ನ ಮೇಲಿನ ಬರಹ*
ಬಾನು ಬಾಗಿದೆ ಕೊನೆಯಲ್ಲಿ
ಅಲ್ಲಯೇ ಮುಗಿಯಲು ಅಲ್ಲ
ಮನದಿ ಅಳುಕು ಬಿಟ್ಟಲ್ಲಿ
ಅವಕಾಶಗಳು ಇದೆಯಲ್ಲಾ.
*ಬಾನು ನಾಗಿದ ಹಾಗೆ ಕಾಣುವುದು ಹಾಗೆ ನಮ್ಮ ಜೀವನದಲ್ಲಿ ನಾವು ಬಾಗಿ ನಡೆಯುವ ತತ್ವ ಒಳ್ಳೆಯದು*
ಕಾನನದ ದಾರಿಯಲ್ಲಿ ನಡೆದರೂ
ಮರಳಲು ಇದೆ ಅವಕಾಶ
ಠಕ್ಕರ ಜೊತೆಯಲ್ಲಿ ನಡೆದರೂ
ತಿಳಿದು ಹಿಂದಿರುಗು ಸವಕಾಶ.
*ಕೆಟ್ಟ ಜನರ ನಡುವೆ ನಾವು ಇದ್ದರೂ ನಮ್ಮ ತನ ಬಿಡದೆ ಒಳ್ಳೆಯ ದಾರಿಯಲ್ಲಿ ನಡೆಯಲು ನಾ ಮನಸ್ಸೇ ಕಾರಣ ಆಗುತ್ತದೆ. ಅರಿತು ನಡೆ ಎನ್ನುವ ಸಂದೇಶ*
ತಿಳಿಯದೇ ವಿಷವನ್ನು ಸೇವಿಸಿದೊಡೆ
ತೊಳೆದು ತೆಗೆದು ಹಾಕಿ
ಜೀವಿಸಲು ಅವಕಾಶ ಒಂದೆಡೆ
ಉಳಿದ ಜೀವನ ಬಾಕಿ.
*ಎಲ್ಲವೂ ಮನುಷ್ಯನ ಜೀವನ ವಿಶ್ವಾಸ ನಂಬಿಕೆ ಮೇಲೆ ನಿಂತಿದೆ ಎನ್ನುವ ಸಂದೇಶ*
ಕೊನೆಯೇ ಆರಂಭ ಎಲ್ಲಾ
ವಿಶ್ವಾಸ ಇದ್ದರೆ ಕೊರಡೂ ಕೊನರುವುದು
ನಾವು ಒಳಗೇ ಕೊರಗುವುದಲ್ಲ
ಹಠದಿ ಎದ್ದು ನಡೆಯುವುದು.
*ಒಟ್ಟಾರೆ ಕವಿ ಆಶಯ ಚೆಂದ ಇದೆ