ಭಗವಂತ! ನೀನು ಯಾಕೆ ಹೀಗೆ ಮಾಡುತ್ತಿಯಾ

ಎನ್ನುವುದು ತಿಳಿಯಲಾರೆ,

ಅತ್ತ ನೋಡಿದರೆ ಬರಗಾಲ; ಇತ್ತ ನೋಡಿದರೆ ಉಬ್ಬರ,

ಅತ್ತ ಮಳೆ ಬಂದರೆ ಸಡಗರ, ಇತ್ತ ಮಳೆ ಬಾರದೆ ಇದ್ದರೆ ಸಡಗರ

ಎಲ್ಲೆಡೆ ಆ ಪರಿಸ್ಥಿತಿ ಭೀಕರ.

ಊಟ ತಿಂಡಿ ಇಲ್ಲದೆ ಬದುಕುವುದು ಹೇಗೆ ಹೆಚ್ಚೆಂದರೆ ಎರಡು ವಾರ?

ಆ ಸಮಯ ಆಲೋಚಿಸಿದರೆ ಭಯಂಕರ.

ಆದರೆ, ಈಗಲೂ ಸಿಲುಕಿದೆ ಮಡಿಕೇರಿ, ಬಿಹಾರ.

ನಮ್ಮ ಪ್ರದೇಶಕ್ಕೂ ಹೀಗೆ ಆಗಬಹುದೇ ಎಂದು ಆಲೋಚಿಸಿದರೆ, ಅದು ಸುಲಭಕರ

ಹೇಗೆಂದರೆ ಅದು ಮನುಷ್ಯನ ಅತಿ ಆಸೆಯ ಚಮತ್ಕಾರ.

ಇನ್ನಾದರೂ ಬಳಸುವ ಪ್ಲಾಸ್ಟಿಕ್, ನೀರು ಹಿತಮಿತಕರ

ಆಗಲಾದರೂ ಬಾರದೆ ಇರುವುದು ಈ ಬರಗಾಲ, ಉಬ್ಬರ

- ವಿಜಯಲಕ್ಷ್ಮಿ. ಆರ್. ಕಾಮತ್