ತಾಯಿ ಮಕ್ಕಳ ಸಂಬಂಧ ಹಾಲು ಜೇನಿನಂತೆ

ಅದನ್ನು ಸವಿದರೆ ಬರಿ ಪ್ರೀತಿಯಂತೆ

ಆಕೆಯು ಸವಿಜೇನಿಗಾಗಿ ದುಡಿಯುವ ಜೇನುಹುಳು ಇದ್ದಂತೆ  

ಜೀವಕ್ಕೊಂದು ಉಸಿರಿನಂತೆ

ದೇಹಕ್ಕೊಂದು ಶಕ್ತಿಯಂತೆ

ಕಣ್ಣಿಗೊಂದು ದ್ರಷ್ಟಿಯಂತೆ

ಮನೆಗೊಂದು ದೀಪದಂತೆ

ನಿಸ್ವಾರ್ಥಿಯಾಗಿ ದುಡಿಯುವ ಜೀವವೊಂದೆ

ಅಮ್ಮ ಎಂದಾಗ ಓಡಿ ಬಂದು ಪ್ರೀತಿಸುವಳು ದುಂಬಿಯಂತೆ

ನೋವ ನುಂಗಿ ನಗೆಯ ನೀವ ಆದರ್ಶರೂಪಿಯಂತೆ

ನಭೋಮಂಡಲದ ಎಲ್ಲಾ ತಾರೆಗಿಂತ ಮಿಗಿಲಾದ ದೇವರಂತೆ..‌.


                            -ವಿಜಯಲಕ್ಷ್ಮಿ.ಆರ್.ಕಾಮತ್

                             ‌‌‌‌     ಮುನಿಯಾಲು