ವರದಿ ರಾಯಿ ರಾಜಕುಮಾರ
ಮೂಡುಬಿದರೆ: ಅಲಂಗಾರು ಮೌಂಟ್ ರೋಜರಿ ಆಸ್ಪತ್ರೆ, ಲಯನ್ಸ್ ಕ್ಲಬ್ ಮತ್ತು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಗಳ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 18 ರಂದು ಆಸ್ಪತ್ರೆಯ ವಠಾರದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮಾತನಾಡಿ ಅಭಿವೃದ್ಧಿ ಹೊಂದುತ್ತಿರುವ ಸಂಸ್ಥೆಯ ಸರ್ವಾಂಗೀಣ ಸಾಧನೆಗೆ ಸಹಕಾರ ಸಪ್ತಾಹ ಉತ್ತಮ ಪ್ರಶಸ್ತಿಯನ್ನು ನೀಡಿದೆ. ಎಲ್ಲರ ಸಹಕಾರ ಸಂಸ್ಥೆಗೆ ಅಗತ್ಯ ಇದೆ. ಸೊಸೈಟಿ ಸದಾಕಾಲ ಸೇವೆ ನೀಡಲು ಸಿದ್ದ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸಹಕಾರಿಗಳಾದ ಸುರೇಶ್ ಕೋಟ್ಯಾನ್, ಅರುಣ್ ಕುಮಾರ್ ಜೈನ್ ರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಿಸ್ಟರ್ ಪ್ರೆಸಿಲ್ಲ, ಅಮಿತ್ ಡಿಸಿಲ್ವ, ಡಾ. ಪುನೀತ್ ಪಕ್ಕಳ, ಎನ್ ರಾಯ್ ಸಲ್ದಾನ, ಪಾವನ ಶೆಟ್ಟಿ, ಮುಕುಂದ, ಶ್ರೇಯಾ ಉಪಸ್ಥಿತರಿದ್ದರು. ಸೊಸೈಟಿಯ ಪ್ರಬಂಧಕಿ ಅಭೀಷ್ಟ ಜೈನ್ ಸ್ವಾಗತಿಸಿದರು. ಸುಧಾಕರ ಅಂಚನ್ ಕಾರ್ಯಕ್ರಮ ನಿರ್ವಹಿಸಿದರು. ಜಾಯ್ಲಿನ್ ಕಾರ್ಡರೋ ವಂದಿಸಿದರು.