ಲಜ್ಜೆಯನಿತ್ತ ಹೆಜ್ಜೆಯನೊತ್ತಿ

ಬಂದವಳಲ್ಲಿತ್ತು ಭೀತಿ...


ಕಂಡೊಡನೆ ನಿನ್ನ, ಮನ

ಮೋಹಕ ಕಣ್ಣ ಕಾಂತಿ...

ಕದಡಿತ್ತು ಅವಳ ಮನದ

ಚಂಚಲತೆಯ ಶಾಂತಿ...


ಬಯಸಲು ತನ್ನಿಯನ ಒಲವಾ

ಆಕೆ ಪಟ್ಟ ಪಾಡು ಫಜೀತಿ...

ಕಂಡರೂ ಜೊತೆಗೂಡುವ ಕೋಟಿ ಕನಸು

ಅನಿವಾರ್ಯ ಪಾಲನೆ ಸಮಾಜದ ರೀತಿ-ನೀತಿ...


ಬೇಡೇನೂ ಬೇಕಿಲ್ಲ ಅವಳಿಗೆ

ಸಿಕ್ಕರೆ ನಿನ್ನ ಹಿಡಿ ಪ್ರೀತಿ...

ಬಹುಶಃ ಬೇಡಿಕೆಗೆ ಬೆಲೆಯಿಲ್ಲಾ

ಎಂದು ಅರಿತವಳು ಪಡೆವಳೇ ವಿರಕ್ತಿ...

              - - ಮಾಗಿದ ಮನಸ್ಸು