ಮನುಕುಲವೇ ,ಒಂದಾಗು
ಹಿಂದುವಲ್ಲ ಕ್ರಿಸ್ತ ಮುಸಲ್ಮಾನನಲ್ಲ
ಜೈನ ಪಾರ್ಸಿಯು ಅಲ್ಲ
ಕೊರೊನಕೆ ಮತವಿಲ್ಲ!
ಹೆದರಿಸಿತು ಯಮನಂತೆ ಬಹಳ
ಮತ ಬ್ರಾಂತಿ ಮರೆಯಾಯಿತಲ್ಲ
ಈಗ ಜನ ಜಾತ್ರೆ ಮರುಳಂತೂ ಇಲ್ಲ !
ಭಗವಂತ ನುಡಿದ
ಕೇಳಲಿಲ್ಲವೇ ಮನುಜಾ !
ಪರಂಪರೆಯ ಮಾತು
ಪ್ರಾಜ್ಞೆಯೇ ಮನುಕುಲಕೆ ಧಾತು !
'ನನ್ನ ಹುಡುಕುತ ನೀನು
ಯಾಕೆ ಅಲೆಯುವೆ ಕುರುಡ !
ನಿನ್ನೊಳಗೆ ನಾನು
ಒಳ ತೆರೆದು ನೋಡು !'
ಕೊರೊನ ಕೇಳಿಸಿತಿಂದು :
ಯಮ ನಿಯಮ ಆಸನ
ಪ್ರಾಣಾಯಾಮ ಧಾರಣೆ ಧ್ಯಾನ !
ಸಮಾಜ ಸುಧಾರಣೆ ಜೀವನ
ಅತಿ ಲೌಕಿಕಕೆ ನಿಬಂಧನ !
ಬೇಕಿಲ್ಲ ಗೊಂದಲದಿ ಜಾತ್ರೆ
ಬಿಡಬೇಡಿ ಶುಚಿ ಶ್ರದ್ದೆ ಮಾತ್ರೆ !
ವಿಭ್ರಾಂತಿ ಜಾತಿ ಮತ ಬೇಡ
ಸಾಮೂಹಿಕ ಶುದ್ದಿ ಬೇಕೀಗ !
ಡಾ ಅಬ್ರಾಜೆ ಕೇಶವ ಭಟ್