ಬದುಕಿಉಳಿಯೆ ಬೇವುಬೆಲ್ಲ
ಯುಗ ಯುಗಾದಿ ಬರುತಿದೆ
ನವ ವರುಷ ಅದು ಇದೆ !
ಹರುಷ ಬಹಳ ಅಂದು ತಂದು
ವೈರಸ್ ಇಂದು ತರುತಿದೆ!
ಮನುಕುಲದ ಜೀವರಾಶಿ
ಸುತ್ತ ಕಾಡ್ಗಿಚ್ಚು ,ಕೊರೊನ ಭೀತಿ!
ಮಹಮ್ಮಾರಿ ,ದೊಡ್ಡ ಸೋಂಕು
ಇಂದನವೇ ಜನರ ಕೂಡು ಗುಂಪು!
ಅರಿವು ಜನಕೆ ,ಬೇರ್ಪಡೆಯೇ ಬೇಕು
ಬೇಡ ಗುಂಪು ,ಮನೆಯೇ ಸಾಕು!
ಉಳಿಸಿ ಮೊದಲು ,ನಿಮ್ಮ ಜೀವ
ಬದುಕಿ ಉಳಿಯೆ ಬೇವು ಬೆಲ್ಲ !
ಯುಗಾದಿ ಹಬ್ಬ ಮತ್ತೆ ಬರಲಿ
ಕೊರೋನ ಮಾತ್ರ ಹಬ್ಬದಿರಲಿ !
ಡಾ . ಅಬ್ರಾಜೆ ಕೇಶವ ಭಟ್