ನಮನ


ಮಂದಿರದೊಳಿಲ್ಲ ದೇವರು

ಶುಭ್ರ ಶ್ವೇತಾಂಬರ ಧರಿಸಿ

ಪ್ರಸನ್ನ ಮನಶ್ಚಿತ್ತದಿಂದ

ಉಸಿರಿಗೆ ಪ್ರತಿಉಸಿರ ನೀಡಿ

ವೈದ್ಯರು ದಾದಿಯರೆಂಬ

ನಿಜ ನಾಮ ಹೊತ್ತು


ಜನರ ಜೀವ ರಕ್ಷಕಣೆಗೇ

ನಿಂತಿದ್ದಾರೆ ದೇವರು

ಜನರ ಬಂಧುವಾದ 

ಜಗದ ಬಂಧುವಿನ ಸೇವೆಗೆ

ಮೊಳಗಿತೋ  ಮೊಳಗಿತು

ಪಾಂಚಜನ್ಯ ಮೊಳಗಿತು


ಉಸಿರ ಒತ್ತೆಯಿಟ್ಟು ಛಲದಿ

ಮುಂದೆ ಹೆಜ್ಜೆ ಇಟ್ಟ ದಿಟದಿ

ಧೀರಯೋದನಲ್ಲಿ

ನವ ಚೈತನ್ಯವನುಧಿಸಲು 

ಮೊಳಗಿತೋ ಮೊಳಗಿತು

ಘಂಟಾನಾದ ಮೊಳಗಿತು


ಸೋಲನರಿಯದಂತ ಶ್ರಮದ

ನಿಷ್ಠ ನಿಯಮವನ್ನು ಪಾಲಿಪ

ಹಂಗು ತೊರೆದು ಬಂಗ ಬಿಟ್ಟು

ಹಗಲು ಇರುಳು ಒಂದೇಯೆಂದು

ಶ್ರೇಷ್ಠತೆಯ ಸೇವೆ ಗೈವ

ಕಷ್ಟದೆದುರು ಕಠೋರ ವಜ್ರದೇಹಿಗಳಾದ

ಪೊಲೀಸ್ ಅಧಿಕಾರಿಗಳ

ಕಾರ್ಯಮೆಚ್ಚಿ ಮೊಳಗಿತೋ

ಮೊಳಗಿತು ಜಾಗಟೆಯ ನಾದ ಮೊಳಗಿತು


ಕಾಲ ಗಣನೆ ಎಲ್ಲ ಮೀರಿ

ನಿತ್ಯ ಕಾರ್ಯದಲ್ಲಿ ನಿರತ

ತಪ್ಪದಂತೆ ಸೇವೆ ನೀಡೋ

ಸರ್ವ ಜನರ ಬಂಧುವೋ

ಸೇವೆಗೆಂದು ಮುಂದಿರೋ

ಸಾರಿಗೆಯ ಸಿಬ್ಬಂದಿಗಳಿಗೆ

ಮೊಳಗಿತೋ ಮೊಳಗಿತು

ತಾಳದ ತರಂಗದ ಸ್ಪೋರ್ತಿ ಮೊಳಗಿತು


ಸ್ವಚ್ಛತೆಯ ಮಂತ್ರ ಸಾರುತ 

ನೆಚ್ಚಿನ ಪರಿಸರವನ್ನು ದಿನವೂ

ಚೊಕ್ಕಗೊಳಿಸಿ ಸರ್ವಜನರ

ಆರೋಗ್ಯಕಾಗಿ ನಿರಂತರವು

ಶ್ರಮಿಸೋ ಶ್ರಮಿಕರಾದ

ಪೌರ ಕಾರ್ಮಿಕರಿಗೂ

ಸ್ಪೋರ್ತಿಯ ಸೆಲೆಯಾಯಿತೋ

ಮೊಳಗಿತೋ ಮೊಳಗಿತು

ಚಪ್ಪಾಳೆಗಳ ಶಬ್ದ ಮೊಳಗಿತು.


-ಪ್ರೀತಿ. ಮಾಂತಗೌಡ. ಬನ್ನೆಟ್ಟಿ