ಭಾವಬೃಂಗದಲೊಂದು ಝೇಂಕಾರ ನೋಡ

ಹೊಳೆಯುತಿಹ ಕಣ್ಣೊಳಗೆ ಮಧುವ ಅರಸುವಂತೆ

ಅತ್ತಿತ್ತ ಹಾರಾಡಿ ಮುತ್ತಿನ ಸ್ಪರ್ಶಕದು ಕಾಯುತಿದೆ

ತೀರದ ಬಯಕೆಯನು ತಿಳಿಸುವ ಹಂಬಲದಿ


ಮೌನದೆಡೆ ಹರಿಯುವಿಕೆ ಅಲ್ಲ ಸಹನೀಯ

ನಿರಂತರ ಶಬ್ದವನು ಸೃಜಿಸುವುದೇ ಪ್ರೇಮ

ಎತ್ತೆತ್ತಲೋ ಹಾರಿ ಪ್ರಶ್ನಿಸುವ ಭಾವಕ್ಕೆ

ಮತ್ತೆ ಕಂಡಿದೆ ತನ್ನ ಕಾಯದಲೆ ಉತ್ತರ


ಹೂವಿಂದೂವಿಗೆ ಬದಲಾಗದ ನಿತ್ಯ ಸೇವೆ

ರೂಪಾಂತರವಷ್ಟೆ ದುಂಬಿಗಿಹ ಧೇಯ

ಯಾರ ಸಹಾಯಕದೊ ಆಗುವುದೋ ಛಿದ್ರ

ತಿಳಿದೂ ಮತ್ತದೇ ಜಾಲದಲಿರುವುದೇ ಪ್ರೇಮ


-ಜೀವಪರಿ