ಯಾರದೋ ಕಿಸೆಯೊಳಗೆ
ಕಳೆದು ಹೋದ ನ್ಯಾಯವನು
ಹುಡುಕುತಾ ಹೊರಟವಳಿಗೆ
ಹೆಸರಿಟ್ಟರು ನ್ಯಾಯವಾದಿ......
ಅರ್ಪಿತವಾಯ್ತು ನನದೆಲ್ಲ ಕನಸು
ಕಳೆದು ಹೋಗಿದೆ ಜೋಡಿ ಕಂಗಳು
ಕಿವಿಗಳೂ ಕಿವುಡಾಗಹೊರಟಿದೆ
ಸರ್ವಸಮರ್ಥಳೀಗ ಅಂಗವಿಕಲೆ......
ನಿಜ ಎದುರಿಗಿದೆ ಅರುಹುವಂತಿಲ್ಲ
ಲಕ್ಷ್ಮಿ ಕಟಾಕ್ಷದಲಿ ಕತ್ತಲ ಸಾಮ್ರಾಜ್ಯ
ಮನಸ್ಸಾಕ್ಷಿ ಲಿಖಿತದಲಿ ಸೋತಿದೆ
ಶಾರದೆ ತಾ ಮೂಲೆಗುಂಪಾಗಿಹಳು......
ನಾ ನ್ಯಾಯದಿ ವಾದಿಯೋ
ನ್ಯಾಯ ಸಮ್ಮತಿಗೆ ವಾದಿಯೋ
ಸಿಗದೇ ಹೋದ ನ್ಯಾಯಕೆ ವಾದಿಯೋ
ಜೀವನವಂತೂ ವ್ಯರ್ಥ ಅರ್ಪಣೆ.......
- ಜೀವಪರಿ