ಮಂಗಳೂರು:- ಅಕ್ಟೋಬರ್ 3ಕ್ಕೆ ಬ್ಯಾರಿ ಭಾಷಾ ದಿನಾಚರಣೆ ಬ್ಯಾರಿ ಭಾಷೆಗೆ ಮಾನ್ಯತೆ ನೀಡಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು 2007ನೇ ಇಸವಿ ಅಕ್ಟೋಬರ್ 3ರಂದು ಕರ್ನಾಟಕ ಸರಕಾರ ಘೋಷಿಸಿದ್ದು ಆ ದಿನವನ್ನು ಬ್ಯಾರಿ ಭಾಷಾ ದಿನವನ್ನಾಗಿ ನಿಗಧಿಪಡಿಸಿ 2013ನೇ ದಾಸವಿಯಿಂದ ಬ್ಯಾರಿ ಭಾಷಾ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. 

ಆ ಪ್ರಯುಕ್ತ 2020ನೇ ಇಸವಿಯ ಬ್ಯಾರಿ ಭಾಷಾ ದಿನಾಚರಣೆಯನ್ನು ಅಖಿಲಭಾರತ ಬ್ಯಾರಿ ಪರಿಷತ್ ವತಿಯಿಂದ ಮಂಗಳೂರಿನ ನವಭಾರತ್ ಸರ್ಕಲ್ ಸಮೀಪದ ಹೋಟೆಲ್ ಓಶಿಯನ್ ಪರ್ಲ್ ನಲ್ಲಿ ಅಕ್ಟೋಬರ್ 3ರ ಬೆಳಿಗ್ಗೆ 9-30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾಧ್ಯಕ್ಷ ಜೆ. ಹುಸೈನ್ ವಹಿಸಲಿದ್ದಾರೆ. ಬಿ.ಎ. ಮುಹಮ್ಮದ್ ಹನೀಫ್ ಅಧ್ಯಕ್ಷರು ಅಖಿಲಭಾರತ ಬ್ಯಾರಿ ಪರಿಷತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 

ಅಖಿಲ ಭಾರತ ಬ್ಯಾರಿ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು ಸ್ವಾಗತ ಕೋರಲಿದ್ದಾರೆ. ಉಪಾಧ್ಯಕ್ಷ ಯೂಸುಫ್ ವಾರ್‌ರವರು ವಿವಿಧ ಸ್ಪರ್ಧಾ ವಿಜೇತರ ಹೆಸರು ಘೋಷಿಸಲಿದ್ದು, ಗೌರವ ಸಲಹೆಗಾರ ಬಿ.ಎಂ. ಮಾರಟ್ ಅಲಿ ಬಹುಮಾನ ವಿತರಣೆ ನೆರವೇರಿಸಲಿದ್ದಾರೆ. ಬ್ಯಾರಿ ಭಾಷೆಯಲ್ಲಿ ಬರೆದು ನೋಂದಾಯಿಸಿದ ಭೂದಾಖಲೆಯನ್ನು ಮುಹಮ್ಮದ್ ನಬಿರ್ ವ್ಯವಸ್ಥಾಪಕ ನಿರ್ದೇಶಕರು ಸಾರ್ಟ್ ಸಿಟಿ ಮಂಗಳೂರು ಬಿಡುಗಡೆಗೊಳಿಸಲಿದ್ದಾರೆ.