ಮಂಗಳೂರು: ರಾಜಸ್ಥಾನ ಆರ್ಟ್ ಮತ್ತು ಕ್ರಾಫ್ಟ್ ರವರ ಸಂಯೋಜನೆಯಲ್ಲಿ ರಾಜಸ್ಥಾನ ಆರ್ಟ್ ಹಾಗೂ ಕ್ರಾಫ್ಟ್ ವಿವಿಧ ಕರಕುಶಲ ವಸ್ತುಗಳ ಹಾಗೂ ಕೈಮಗ್ಗ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ "ರಾಜಸ್ಥಾನ್ ಗ್ರಾಮೀಣ ಮೇಳ" ವನ್ನು ನಗರದ ಬಂಟ್ಸ್ ಹಾಸ್ಟೇಲ್ ರಸ್ತೆಯ ಹೋಟೇಲ್ ವುಡ್ ಲ್ಯಾಂಡ್ಸ್ ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಅಕ್ಟೋಬರ್ 1, ಗುರುವಾರದಂದು ಮಂಗಳೂರು ಮೇಯರ್ ಶ್ರೀ ದಿವಾಕರ್ ಪಾಂಡೇಶ್ವರ್ ಇವರು "ರಾಜಸ್ಥಾನ್ ಗ್ರಾಮೀಣ ಮೇಳ" ವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಹೊರ ರಾಜ್ಯಗಳ ಗ್ರಾಮೀಣ ಪ್ರತಿಭೆಗಳು ತಯಾರಿಸಿದಂತಹ ಕಲಾತ್ಮಕವಾದ ವಿವಿಧ ಶೈಲಿಯ ಕರಕುಶಲ ವಸ್ತುಗಳು ಇಂದು "ರಾಜಸ್ಥಾನ್ ಗ್ರಾಮೀಣ ಮೇಳ"ದ ಮೂಲಕ ನಮ್ಮ ಬಳಿಗೆ ಬಂದಿದೆ. ಈ ವಸ್ತುಗಳಿಗೆ ಉತ್ತೇಜನ ನೀಡುವ ಮೂಲಕ ನಾವು ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು. ಇಲ್ಲಿ ರಾಜಸ್ಥಾನ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಲ್ಲಿ ತಯಾರಾದ ಕ್ರಾಫ್ಟ್ ವಿವಿಧ ಕರಕುಶಲ ವಸ್ತುಗಳ ಹಾಗೂ ಕೈಮಗ್ಗ ಸೀರೆಗಳ ಬೃಹತ್ ಸಂಗ್ರಹವಿದ್ದು, ಹೊರ ರಾಜ್ಯಗಳಿಗೆ ಹೋಗದೇ ಇಲ್ಲಿಯೇ ನಮ್ಮ ಜನತೆ ಇದರ ಪ್ರಯೋಜನ ಪಡೆಯಬಹುದು. ಮಂಗಳೂರಿನ ಜನತೆಯ ಆಶೀರ್ವಾದದಿಂದ ಈ ಮೇಳವು ಅತ್ಯಂತ ಯಶಸ್ಸು ಕಾಣಲಿ ಎಂದು ಶುಭಾಹಾರೈಸಿದರು.
ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಕದ್ರಿ ಮನೋಹರ್ ಶೆಟ್ಟಿ ಹಾಗೂ ಮಂಗಳೂರಿನ ಹೊಟೇಲ್ ವುಡ್‌ಲ್ಯಾಂಡ್ಸ್ ಮಾಲ್ಹಕ ಎರ್ಮಳ್ ರಮೇಶ್ ಭಟ್ ಮುಖ್ಯ ಅಥಿತಿಗಳಾಗಿದ್ದರು. ರಾಜಸ್ಥಾನ ಗ್ರಾಮೀಣ ಮೇಳ ಸಂಯೋಜಕ ಮಹಾವೀರ್ ಮೇಳದ ಕುರಿತು ಮಾಹಿತಿ ನೀಡಿದರು.
ಮಾರಾಟ ಮತ್ತು ಪ್ರದರ್ಶನ : ಈ ಗ್ರಾಮೀಣ ಮೇಳದಲ್ಲಿ ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ಕೈಮಗ್ಗದ ಸೀರೆ ಹಾಗೂ ಸಿಲ್ಕ್ ಸೀರೆಗಳು ಮತ್ತು ಕರಕುಶಲ ವಸ್ತುಗಳ ಬೃಹತ್ ಸಂಗ್ರಹವಿದ್ದು, ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ. ರಾಜಸ್ಥಾನ ಸಿಲ್ಕ್ ಸಾರಿ, ಮೈಸೂರ್ ಸಿಲ್ಕ್ ಸಾರಿ, ಓರಿಸ್ಸಾ ಸಿಲ್ಕ್ ಸೀರೆಗಳು, ಕಾಂತ ವರ್ಕ್ ಸಿಲ್ಕ್ ಸೀರೆಗಳು, ಕೋಸಿಯಾ ಕೈ ಮಗ್ಗದ ಸೀರೆಗಳು, ಬಾಗಲ್ಪುರ್ ಸಿಲ್ಕ್ ಸೀರೆಗಳು, ಬನರಸ್ ಸಿಲ್ಕ್ ಸಾರಿ, ವೆಜ್ ಡೈ ಬ್ಲಾಕ್ ಪ್ರಿಂಟೆಡ್ ಸೀರೆಗಳು, ಮಧುರೈ ಸುಗುಡಿ ಕಾಟನ್ ಸೀರೆಗಳು, ಸಾಂಬ್ಲಪುರಿ ಇಕ್ತಾ ಸೀರೆಗಳು, ಕೈಮಗ್ಗದ ಕಾಟನ್ ಸೀರೆಗಳು, ಚಾಂದಾರ್ ಕಾಟನ್ ಸೀರೆಗಳು, ಪೌಂಚಪಲ್ಲಿ ಕೈಮಗ್ಗದ ಸೀರೆಗಳು, ಫೋಲ್ಕರಿ ವಿನ್ಯಾಸದ ಪಾಟಿಯಾಲ, ಫೋಲ್ಕರಿ ಬೆಡ್ಶೀಟ್, ಹಾಗೂ ಸೋಫಾ ಸೆಟ್ ಕವರ್, ಸಿಲ್ಕ್ ಕುಶನ್ ಕವರ್, ರಾಜಸ್ಥಾನ್ ಬೆಡ್ಶೀಟ್ಗಳು ಹಾಗೂ ಇನ್ನಿತರ ಕೈಮಗ್ಗದ ಸೀರೆಗಳು ಇಲ್ಲಿ ಲಭ್ಯವಿರುವುದು.
ಮಾತ್ರವಲ್ಲದೇ ಜೋಧ್ಪುರ್ ಕರಕುಶಲ ಮರದ ಪಿಠೋಪರಣಗಳು, ಸಾರಂಗ್ಪುರ್ ಮರದ ಪಿಠೋಪರಣಗಳು, ಹೈದಾರ್ಬಾದ್ ಕಪ್ಪು ಮೇಟಲ್ನ ವಿಗ್ರಹಗಳು, ಹಿತ್ತಳೆಯ ಕಲಾಕೃತಿಗಳು, ವಿಶೇಷ ಬೆಡ್ ಚಾಪೆಗಳು, ವಿದ್ಯುತ್ ಅಲಂಕಾರಿಕ ಸಾಮಾಗ್ರಿಗಳು, ವಿಶೇಷ ಶೈಲಿಯ ಜೈಪುರ್ ಆಭರಣಗಳು, ವಿಶೇಷ ವಿನ್ಯಾಸದ ವೈವಿಧ್ಯಮಯ ಮಣ್ಣಿನ ವಿಗ್ರಹಗಳು, ನೀಲಿ ಬಣ್ಣದ ಕ್ರಾಕಾರಿ ಐಟಮ್ ಗಳ ಬೃಹತ್ ಸಂಗ್ರಹ ಇಲ್ಲಿವೆ.
ರಾಜಸ್ಥಾನ ಗ್ರಾಮೀಣ ಮೇಳ ಸಂಯೋಜಕರು: ಮಹಾವೀರ್ - ರಾಜಸ್ಥಾನ ಆರ್ಟ್ ಎಂಡ್ ಕ್ರಾಫ್ಟ್ : ನಂ.64, ಅಮೀನಾ ಮಂಝಿಲ್, ಒಂದನೇ ಅಡ್ದ ರಸ್ತೆ, 8ನೇ ಮುಖ್ಯ ರಸ್ತೆ, ಸುಬ್ಬರಾಜು ಲೇಔಟ್, ಲಕ್ಷಂದ್ರ ಬೆಂಗಳೂರು, 560030 / ನಂ 56/8, ತಿರುಮಲ ಮೆನ್ಶನ್, 7ನೇ ಅಡ್ಡ ರಸ್ತೆ, 8ನೇ ಮುಖ್ಯರಸ್ತೆ, ಶಾಕಾಂಬರಿ ನಗರ, ಐಜಿ ಸರ್ಕಲ್, ಜೆ.ಪಿ ನಗರ /ಚೆನೈ ಶಾಖಾ ಕಚೇರಿ : ನಂ 164, ಡಾ|ನಟೆಸನ್ ರೋಡ್, ತ್ರಿಪ್ಲಿಕೆನ್ ಚೆನೈ - 600005 - ಮೊಬೈಲ್ : +919841278707