ತಂಬೆಲರು ಸೂಸಿದವು

ಹೊಂಬಿಸಿಲು ಹೊರಡುವುದು

ಕೆಂಗಿರಣದ ರವಿಯು ನಭದಿ

ಹೊಂಗಿರಣವ ಹರವಿ ನಗದಿ


ಒಂಪು ಮರಗಳಲಿ ಓಲಾಟ

ಕಂಪು ಕುಸುಮದಲಿ ತೊನೆದಾಟ

ತೇಜಸ್ಸನು  ಹರಡಿ

ಓಜಸ್ಸುನು ನೀಡಿ...


ಚಿಮ್ಮಿ ಹೋಮ್ಮುತ್ತ ಗಿರಿಕಾನನದಿ

ನಮ್ಮೀ ಮಲೆನಾಡ ಕಾಡಿನೊಳಗೆ..

ಹೆದ್ದುಂಬಿಗಳು ಹಾರುವವು

ಹೆದ್ದೊರೆಗಳು ಹರಿಯುವವು


ಮೂಡಣದಿ ಉದಯಿಸಿ

ಮೋಡಗಳ ಕರಗಿಸಿ

ಕುಚಂದನದಿ ಹೊಳೆವ

ಕಂಚಾರನನು ನೋಡಲೂ


ಬರುತಿಹವು ಬಾನಾಡಿ

ರೆಕ್ಕೆ ಬಡಿಯುತ ಹಾರಿ

ಬಾಂದಳದ ಕಡೆಗೊಮ್ಮೆ

ದೃಷ್ಟಿಯಾ ಬೀರಿ..


ಸಂಜೆ ಸಮಯದಿ ಇಳಿತ

ಮಿಂಚಿನೋಟದ ಸೆಳೆತ

ಕಣ್ಗಡೆ  ಮೀರುವ ನೋಟ

ಕಣ್ತಣಿಯುವ ಮಾಟ


ಸ್ವರ್ಣಗಿರಿಯನು ದಾಟಿ ಸ್ವರ್ಮಣಿ

ಹೊರಟನು ಕಣ್ಬೆಳಕದಿ ಜಾರುತ

ಕಿಗ್ಗಡಲ ಮೇಲಿಂದ ಹೆಗ್ಗಡಲ ಸೇರಲು

ಪಡುವಣದ ಒಡಲಿಗೆ ಕಡಲಿನ ಮಡಿಲಿಗೆ.



-ಪ್ರೀತಿ ಮಾಂತೇಶ ಬನ್ನೇಟ್ಟಿ