ಪಿಂಗಾರ
ಮುಂಗಾರಲಿ ಹಿಂಗಾರಲಿ
ರಂಗೇರುತಲಿ ಹಸಿರು ಹಸಿರಸಿರು
ಕಸದಿಂ ತಾ ರಸ ಸತ್ವವ ಹೀರಿ
ನಿಂತಿದೆ ಬುಡ ಪಾಯದಿ ದೃಡದಿ
ತುಡಿತದಿ ನೀಡಲು ತಾ ಮುದದಿ
ಹಿಮಮಣಿಯಲಿ ಮಳೆಹನಿಯಲಿ
ಮುತ್ತುಹನಿಗಳ ರಾಶಿಯಲಿ
ಸುಳಿಸುಳಿಗಳು ಮಿಂದೇಳುತಲಿ
ಮಣ್ಣಿನ ಕಣ ಮರದಾ ಋಣದಿ
ತಾಯ್ತನದ ಹೀರಿಮೆಯಲಿ
ಚಿಗುರಿದೆ ಗೊನೆ ಗರಿಗೆದರಿ
ತುಸು ಕಂಪಿಸಿ ಕುಡಿಯೊಡೆದು
ಮಲ್ನಾಡ ಮೈಸಿರಿಯಲಿ ಬೆಳೆದ
ಶುಭಸೂಚಕದೀ ಪುಷ್ಪವೇ ಪ್ರಥಮಾ
ಕಂಗಲಿ ಸಿಂಗಾರಿಯ ಜನನ
ಪಿಂಗಾರವೇ ಇದರ ನಿಜನಾಮ.
ಪ್ರೀತಿ. ಮಾಂತೇಶ. ಬನ್ನೆಟ್ಟಿ.