ಕೊರೊನ ! ಕಾಲ !
ಸೃಷ್ಟಿಕರ್ತನು ಪರಮೇಷ ಮಹಾದೇವ
ಪ್ರಸಾದಿಸಿದನೆಮಗೆ ನಮ್ಮಾತ್ಮ ಜೀವ
ಸೃಷ್ಟಿ ಮಾಡಲು ಮನುಜ ,ದೇವಕಾರ್ಯ
ಜಗತ್ತಲ್ಲಿ ಕೋಲಾಹಲ,ಕೊರೊನ ಕಾಲ !!
ಚಂಚಲಾತ್ಮ
ಜೀವದ ಕೊನೆಯಲ್ಲ ಮರಣ
ಪುನರಪಿ ಜನ್ಮಕದು ಒಂದು ನೆವನ !
ಚಂಚಲಾತ್ಮ ಜೀವದ ಪಯಣ
ವಿಶ್ರಾಂತಿ ದಾಮ ,ಪರಮನಲಿ ಲೀನಾ!
ಡಾ .ಅಬ್ರಾಜೆ ಕೇಶವ ಭಟ್