ಹುಟ್ಟು
ಎರಡು ಜೀವಿಗಳಿಂದ
ಹುಟ್ಟುವುದು ಜೀವಿ ಇನ್ನೊಂದು !
ಶ್ರೇಯವಾದರೆ ಮೆರಗು
ಬರಡಾದರೆ ಕೊರಗು !
———-/———-/-
ಮಕ್ಕಳು
ಮಕ್ಕಳೇ ಮಾಣಿಕ್ಯ
ತಿದ್ದಿದರೆ ಬೆಪ್ಪು !
ಒಪ್ಪಿದರೂ ತಪ್ಪು
ಅಪ್ಪಿದರೆ ಮಾತ್ರ ಸೊಪ್ಪು !
—————————-
ವಿಮಾನ. ವಿಶ್ರಮ
ವಿಮಾನದಲಿ ಪಯಣ ಆರಾಮ
ಆಲೋಚಿಸಿದೆ ಒಂದು ಕ್ಷಣ !
ಈ ವಿಮಾನ ಮಾಡಿದರೆ ವಿಶ್ರಮ
ಒಂದೇ ಕ್ಷಣ ,ಆ ..ರಾಮ !!🙏🏻
—————-
ಮೇಲೆ ..ಕೆಳಗೆ
ಆಕಾಶದಲ್ಲಿ ಪ್ರಯಾಣ
ಚಿಂತನೆಗೆ ಅವಕಾಶ ದಾನ !
ಮುಗಿಲಿಗಿಂತಲೂ ಮೇಲೆ
ವಿಮಾನ ಯಾನ !
ತಲಪುವುದೇ ಕೆಳಗೆ ,
ಇಲ್ಲ ಮುಗಿಲೊಳಗೆ ?
ನೆನೆದರದು ಬಯ
ಬರಬಹುದು ಅಂತ್ಯ !
ಬೂಮಿ ಇರ ಬೇಕು
ಹಾರಿದವ ಇಳಿಯಬೇಕು !
,ಹಿಗ್ಗಿದವ ತಗ್ಗಬೇಕು ,
ಉಬ್ಬಿದವ ಕುಗ್ಗಬೇಕು !
ಅದು ಪ್ರಕೃತಿ ನಿಯಮ
ಇರಬಾರದುಲ್ಲಂಘನ !
——-
ಡಾ ಅಬ್ರಾಜೆ ಕೇಶವ ಭಟ್