ಪಾವನ ಗಂಗೆಯಲಿ ಮಿಂದೆದ್ದು ನೋಡಲು,
ಸುತ್ತಲೂ ಕಸಗಳ ಫಸಲು.
ಆಗ ನಾನು ಹೇಗೆ ಶುದ್ಧ ಎಂಬ ಆಲೋಚನೆಯೇ ಈ ಜಿಜ್ನಾಸೆಗೆ ಮೀಸಲು.
ಜೀವಹಿಡಿದು ಜನರನೇಕರ ಸೇವೆಗೆ ಅಣಿ ಮಾಡಲು
ಸುತ್ತಲಿನ ಶುದ್ದ ಗಾಳಿಯ ಸೇವಿಸಿದರೆ ಅಗೋಚರದಲ್ಲೂ ,
ರಾಸಾಯನಿಕ ಮಾಹಾಮಾರಿಗಳು ತುಂಬಿ ತುಳುಕುವ ವಿಷದ ಫಸಲು.
ಸಿರಿತನ ಬಡತನವ ಬೇಡವೆಂದು ಸೇವಾ ಪಾವನವಾಗಲು
ಮನೆ ಮನ ಮಾರ್ಗಗಳ ದಾರಿ ಹುಡುಕಲು,
ಮತ ಧರ್ಮದ ಜನರಿದ್ದಾರೆ ನೋಡಿ, ಅದು ನಿಶೆ ಇಳಿಯದ ಅಮಲು.
ಕೊನೆಗೂ ಹುಡುಕಿ ಪಾವನದ ಫಸಲು
ಸೋತು ಕೊನೆಯ ಗಳಿಗೆಯಲ್ಲಿ ಸುತ್ತಲೂ
ಅದೇ ಗಂಗೆಯ ನೀರು ಸೋಸಿ ತುಂಬಿಸಿದ ಬರಣಿ , ಇದನ್ನು ಕುಡಿಯಿರಿಸ್ವರ್ಗದಲ್ಲಿ ಸುಖಿಸಲು.
-ರೇಮಂಡ್ ಡಿಕೂನ
ವಿಮರ್ಶಕರು ನೋಡಿ ದಂತೆ
Advocate Parimala : ರೇಮಂಡ್ ರ ಕವನ*
*ಗಂಗೆ ಪಾಪನಾಶಿನಿ ಎನ್ನುವರು ಅವಳನ್ನೇ ಮಲಿನಗೊಳಿಸಿ ಪಾಪ ಕೂಪಕ್ಕೆ ತಲುಪಿಸಿದ ಮನುಜನ ಬಗ್ಗೆ ಕವಿ ಇಲ್ಲಿ ವಿವರಿಸುತ್ತಿದ್ದಾರೆ*
*ಮುಳುಗು ಹಾಕಿ ಮೇಲೆದ್ದು ಸುತ್ತಲೂ ನೋಟಹರಿಸಲು ಕಸಗಳ ರಾಶಿಯೇ ಕಾಣಿಸುತ್ತಿದೆ. ಆಗಲೇ ಮೂಡುವುದು ಪ್ರಶ್ನೆ ಇದರಿಂದ ನಾನೆಷ್ಟು ಶುದ್ಧ ನಾಗಲು ಸಾಧ್ಯವೆಂದು.*
*ಶುದ್ಧಗೊಳಿಸಲು ಒಂದಷ್ಟು ಜನರು ತಯಾರಿರುವರು. ಅದಕಾಗಿ ತಮ್ಮನ್ನು ತಾವು ಸೇವೆಯಲ್ಲಿ ತೊಡಗಿಸಿಕೊಳ್ಳುವರು. ಆದರೆ, ಲಾಭದಾಸೆಯಿಂದಲೋ, ತಿರಸ್ಕಾರ ಭಾವನೆಯಿಂದಲೋ ರಾಸಾಯನಿಕ ತ್ಯಾಜ್ಯಗಳನ್ನೂ ಈ ಗಂಗೆಯ ಮಡಿಲಲ್ಲೇ ತುಂಬುತ್ತಿದ್ದಾರೆ.*
*ನಿಸ್ವಾರ್ಥ ಸೇವೆಯಲಿ ಕೆಲವರು ಮುಡಿಪಾದರೆ, ಇನ್ನು ಹಲವರು ಮತ ಧರ್ಮಗಳ ಕರಾಳತೆಯಲಿ, ಇವಳ ಶಾಂತ ಜೀವನವ ಕದಡುವರು.*
*ಕವಿಮನಕ್ಕೆ ಎಲ್ಲೆಲ್ಲು ಹುಡುಕಿದರೂ ಸ್ವಚ್ಛತೆ ಕಾಣಿಸುವುದಿಲ್ಲ. ಕೊನೆಗೇ ಅದೇ ನೀರನ್ನು ತಾಂತ್ರಿಕತೆಯ ಮೂಲಕ ಶುದ್ಧೀಕರಣ ಗೊಳಿಸಿ ಪವಿತ್ರ ಜಲವೆಂದು ಮಾರಾಟ ಮಾಡುವುದರ ಬಗ್ಗೆ ತಮ್ಮ ಖೇದತೆಯನ್ನು ತೋಡಿಕೊಳ್ಳುತ್ತಾರೆ.*
🙏👍
ರೆಮೆಂಡ್ ಡಿಕೂನ ಒಂದು ಪಾವನಗಂಗೆಯ ಬಗ್ಗೆ ವಿಡಂಬನಾತ್ಮಕವಾಗಿ ವಾಸ್ತವದ ವಿರೋಧಾಭಾಸದ ಧಾರ್ಮಿಕ ಪುನೀತತೆಯ ಒದ್ದಾಟದ ಚಿತ್ರಣವನ್ನು ಕಲ್ಮಷದ ವಿಷಮಯ ನೆಲ ಜಲ ಅನಿಲದ ಮಾಲಿನ್ಯದಲಿ ಬಹಳ ಅರ್ಥಪೂರ್ಣ ಕಾವ್ಯ ಕಟ್ಟಿದ್ದಾರೆ. ಶುಭವಾಗಲಿ ಕವಿಗಳೇ ಭಲೇ
ಶಿವಪ್ರಸಾದ್ ಆರಾಧ್ಯ
೨ನೇ ಕವನ
*ರೇಮಂಡ್ ಡಿಕೂನ್ ರವರ ಪಾವನ ಗಂಗೆಯಲಿ*
*ಸೊಗಸಾದ ಬರಹ ಮನುಷ್ಯನ ಆಂತರ್ಯ ಶುದ್ಧಿಯಾಗದೆ ಆತ ಯಾವ ಪುಣ್ಯನದಿಯಲಿ ಮಿಂದರು ಕೂಡ ನಮ್ಮಿಂದಲೇ ಕರುಷಿತವಾದ ಪರಿಸರ ಕಲ್ಮಶಗಳನ್ನು ನಮಗೆ ಅಂಟಿಸುವಂತೆ ನಾವು ದೇವಾಲಯ, ಚರ್ಚ್ ಮಸೀದಿ ಸುತ್ತುವ ಮೊದಲು ಅಂತರಾಳ
ಅರಿಯಬೇಕೆಂಬ ಆಶಯ ಚೆನ್ನಾಗಿದೆ*
ಕವಿಗಳೆ ಶುಭವಾಗಲಿ
ಅಂತೆಯೆ ನಿಮ್ಮ ಕವನಕೆ ಸುಂದರ ವಿಮರ್ಶೆ ಬರೆದ ಜೀವಪರಿ ಯವರಿಗೂ ಶಿವಪ್ರಸಾದ್ ಸರ್ ಗೂ ಧನ್ಯವಾದಗಳು
*ಶಿರ*