ನನ್ನೊಳಗಿನ ಚೈತನ್ಯದ ಪ್ರಶ್ನೆಯದು 

ನೀನು ನನಗಾರು? ನಾ ನಿನಗಾರು?

ದಶಮಾನ ಕಳೆದದ್ದು ಹುಡುಕಾಟದಲ್ಲಿ

ಮೇಲೆದ್ದ ಪ್ರಶ್ನೆಗಳು ಹೊದಿಕೆಯಾಯ್ತು


ಸರ್ವಜನ ಹಿತಕಾಗಿ ದುಡಿಯಲಾರೆನು

ನನಗಾಗಿ ಬದುಕಿದ್ದು ಭಾರವಾಗಿಹುದು

ಅತ್ತ ಪ್ರೀತಿ ಇಲ್ಲ ಇತ್ತ ಭ್ರಾಂತಿಯೇ ಎಲ್ಲ

ಕಟ್ಟಿಕೊಳುತಿರುವೆ ಗೊಂದಲದ ಗೂಡು


ಭಾವ ಲೋಕದಲ್ಲೊಂದು ಪಲ್ಲಕ್ಕಿ ಉದಿಸಿ

ಮತ್ತೆ ಮತ್ತೆ ಕೇಳುತಿದೆ  ನನ್ನ ನಿಜ ವಿಳಾಸ

ಅರಿಯಲಾರದ ಗುಣಗಳವು ಕದಡಿಹುದು

ಸುಮವದು ಮುದುಡಿದೆ ಮುಳ್ಳ ಬೇಲಿಯಲಿ


ಸುತ್ತ ಎತ್ತೆತ್ತಲೂ ಗೊಂದಲದ ತಿಮಿರ

ಕಳೆದದ್ದು ಸೇರಿತ್ತು ಅವರಿವರ ಬೊಗಸೆ

ನನ್ನದೆನ್ನುವುದಕೇನು ಉಳಿದಿಲ್ಲ ಇಲ್ಲಿ ಈಗ

ನೀನು ನನಗಾರು? ನಾನು ನಿನಗಾರು?..........

- ಜೀವಪರಿ