ಹೊಯ್ಸಳರಾ ದೊರೆ ವಿಷ್ಣುವರ್ಧನನು ...
ಆಜ್ಞಯ ಇತ್ತನು ಕೆತ್ತಲು ಶಿಲ್ಪಕಲೇ..
ಶಿಲ್ಪಿಯು ಹಿಡಿದನು ಉಳಿ ಸುತ್ತಿಗೆಯನು.....
ಕಲ್ಲಿನ ಕಣ ಕಣ ಕಲೆಯನು ತುಂಬಲು...
ಸುತ್ತಲು ಕೆತ್ತಿದ ಹೂ ಬಳ್ಳಿಗಳ......
ಅತ್ಯಾಕರ್ಷಕ ನಾಟುವುದದೂ, ಭಲೇ ನೋಟದಲಿ...
ಆಲೋಚನೆಯಲಿ ಮುಳುಗಲೂ ಆಗಲೇ ಹೊಳೆಯಿತು....
ಶಿಲ್ಪಿಯ ಕಲ್ಪನಾ ತ್ರೀಲೋಕ ಸುಂದರಿ.........
ತಟ್ಟನೆ ಕೊಟ್ಟನು ಕಲ್ಲಿಗೇ ಪೆಟ್ಟನು...........
ನೀಳನೇ ನಾಸಿಕ .....ಬಟ್ಟಲು ಕಣ್ಗಳು ...
ಬಾಗಿದ ಬಿಲ್ಗಳು ತೆರದಲಿ ಕುಡಿ ಹುಬ್ಬುಗಳು ....
ತುಂಬಿದ ಗಲ್ಲವು ಮೊಗವದು ಗೋಲನೇ ಚಂದಿರವು.....
ಶಿರದಲಿ ಧರಿಸಿದ ಕಿರೀಟಗಳು ........
ಕರದಲಿ ಹಿಡಿದಳು ಕೈಗನ್ನಡಿಯಾ......
ಮೂಗಿಗೆ ನತ್ತು ಕೈಬಳೆಯಿತ್ತು .....
ಕೊರಳಲಿ ಮಣಿಸರ ಹಾರವ ತೊಟ್ಟು..
ನಡುವಲಿ ಸಣ್ಣಗೇ,ನವಿಲಿನ ನಾಟ್ಯದ ನಿಲು ಬಂಗಿ....
ನಾಟ್ಯರಾಣಿ ಶಾಕುಂತಲೆಗೂ .....
ಮೀರೀದ ಚಲುವ ಚಂದ್ರಿಕೆ .....
ಈ ಬೇಲೂರಿನ ಶಿಲಾಬಾಲೆ......
ಮೋ಼ಹಕ ಚಲುವಿಗೆ ...ಸೋಲದ ಮನಗಳೇ,...
ಸೋತಿ಼ಹ ಮನದೋಳು ಅರಳಿದ ಮುಗುಳ್ನಗೆ...
ಹೋಯ್ಸಳರಾ ಆ ವಾಸ್ತುಶಿಲ್ಪಕೆ ......
ಅಚ್ಚರಿ ಗೊಂಡಿದೆ ಜಗವಿನ್ನು.....
ಜೀವಿತದಲಿ ಒಮ್ಮೆ ಕಣ್ ಮನ ತಣಿಯಲಿ ಯನುತಿದೆ ...
ಯುಗಗಳೇ ಕಳೆದರೂ ತೀರದ ಕವಿಪುಂಗವರ ವರ್ಣನೆಯು...
ರಚನೆ:-ಪ್ರೀತಿ ಮಾಂತೇಶ ಬನ್ನೇಟ್ಟಿ
ವಿಜಯಪುರ ಜಿಲ್ಲೆ.