ನಮಸ್ತೆ 


ಕೈ ಎರಡು ಜೊತೆಯಾಗಿ 

 ಸೇರೆ ನಮಸ್ತೆ!

ರೋಗ ಪ್ರತಿಬಂದಕ್ಕೆ 

ಇದು ಸುವ್ಯವಸ್ಥೆ !


ಪುರಾತನವೀ ಸಂಸ್ಕೃತಿ 

ಶುಭಾಷಯದ ರೀತಿ  , 

ಭಾರತದ ಸದ್ಗತಿ 

 ಅದೇ ,ನಮಸ್ತೆ!


ನಿನ್ನಾತ್ಮ ನನ್ನಾತ್ಮ ಸೇರಿ

ಪರಮನಲಿ ಒಂದಾಗಿ ಕೂಡಿ !

ವಂದಿಪುವ ಸ್ತುತಿ, 

 ವಂದೇ ನಮಸ್ತೆ!


ಕೈಕುಲುಕುವಿಕೆ ,ಆಲಿಂಗನದಿ 

 ಶಾವುಚದಾ ಕೊರತೆ !

ಕಲ್ಮಶ ಕೊರೊನ  ಸೇರುವಿಕೆ 

 ಬಹಳಷ್ಟು ಕಳಪೆ !


ಸಮಸ್ಯೆ ಪರಿಹಾರಕ್ಕೆ 

ಲೋಕ ಸುಖಃಬಾಗ್ಯಕ್ಕೆ 

ಈಗ  ಎಲ್ಲೆಲ್ಲೂ  ಸಾಕು 

 ಸದಾ ನಮಸ್ತೆ !


ಸಂಸ್ಕೃತಿಯ ಜ್ಯೋತಿಯದು

ಹೆಮ್ಮೆ ನಮಗೆಲ್ಲರಿಗೂ 

ಆರೋಗ್ಯ ಬಾಗ್ಯವೀ 

 ನಮೋ ನಮಸ್ತೆ !


ಡಾ. ಅಬ್ರಾಜೆ ಕೇಶವ ಭಟ್