ಕೋವಿಡ್ 19(ಕೊರೋನ )


ಕೆಮ್ಮುವ ವ್ಯಕ್ತಿಯ ಕಂಡರೆ 

ಗಡಗಡ ನಡುಗುವುದೇತಕೆ 

ಸೀನುವರ ಹತ್ತಿರ ಸುಳಿಯರದೇತಕೆ 

ಭಯ ಭೀತಿಯಲೇತಕೆ ಇರುತಿಹರೋ ಚೀನಿಯರುಡುಗೊರೆ ಹವಾನಾ 

ಹರಡಿದೆ ಎಲ್ಲೆಡೆ ಕೋವಿಡ್ 19 ಕೊರೋನಾ 


 ಅತಿಥಿ ಸತ್ಕಾರವಂತೆ 

ಅಪ್ಪಿ ಸ್ವಾಗತಿಸುವಂತ 

ಸಂಪ್ರದಾಯದ ರಾಷ್ಟ್ರಗಳೆಲ್ಲ 

ಕಾರಣವ ತಿಳಿದಾವೋ ಸ್ವಾಮೀ 

ಆಚರಣೆ ಬಿಟ್ಟಾವೋ 


ಅಪ್ಪಿತಪ್ಪಿಯೂ ಕೂಡ 

ಈ ತಪ್ಪು ಮಾಡುತ್ತಿಲ್ಲಾ 

ಪಬ್ಲಿಕಲ್ಲು ಸೇರತಾ ಇಲ್ಲಾ.. 

ಪ್ರೈವೆಸಿ ಬಿಟ್ರು ಇರತಾಯಿಲ್ಲ 

ನಿಲ್ದಂಗ ಆಗೈತೆ ಬಾಳೇ ತಿಳಿವಲ್ಲದ್ ಆಗೈತೆ 


ಒಬ್ರಮುಖ ಇನ್ನೊಬ್ರು ನೋಡದಂಗ 

ಆಗೇ ಬಿಟ್ಟೈತೆ  ಸ್ವಾಮೀ 

ನನ್ನೊರ್ ತನ್ನೋರ್ ಅನ್ನೋದೆಲ್ಲ 

ಒಂದು ಹೊತ್ನ್ಯಾಗ ತಿಳಿತೈತೆಲ್ಲಾ 

ಹೊರರಾಷ್ಟ್ರದಲ್ಲಿರುವ ನಮ್ಮವರೆಲ್ಲ 

ಅನ್ಯರೇ ಆಗ್ಯಾರೋ, ಆ ಕಾಲ ಬಂದೆ ಬಿಟ್ಟೈತೆ 

ಸ್ವಾಮೀ ತಿಳಿಸೆ ಬಿಟ್ಟೈತೆ. 



ಮುಂದುವರೆದ ರಾಷ್ಟ್ರದಲ್ಲೆಲ್ಲ  

ಟ್ರಾಫಿಕ್ನಲ್ಲೂ ಟೆನ್ಷನ್ ಇಲ್ದೇ 

ಮುತ್ತಿಕ್ಕೋ ಮಹಾನುಭಾವರೆಲ್ಲ 

ಮುಖದಲಿ ಮಾಸ್ಕ ಧರಿಸಿಹರಲ್ಲ 

ಕಾರಣವ ತಿಳಿದಿಹರೋ ಸ್ವಾಮೀ 

ಸುಧಾರಣೆಗೆ ಬಂದಿಹರೋ 


ಕೈಕುಲುಕುವ ಸಿಸ್ಟಾಚಾರದ ರಾಷ್ಟ್ರಗಳೆಲ್ಲ  

ಮೈ ಕೈ ಮುಟ್ಕೊಂಡು, ನೋಡ್ಕೋತವರಲ್ಲ 

ಆಚರಣೆ ಬಿಟ್ಟಾರೋ ಸ್ವಾಮೀ 

ಕುಲುಕಿದ ಕೈಯನು ಮರುಕ್ಷಣ ತೊಳಿಯುವ 

ಪಾಠವ ಕಲಿತಾರೋ 


ಪ್ರತಿ ಮನೆ ಸ್ವಚ್ಛತೆ ಇದ್ದರೆ ಗ್ರಾಮದ ಸ್ವಚ್ಛತೆ

ರಾಷ್ಟ್ರದ ಸ್ವಚ್ಛತೆ, ಇಚ್ಚೆಯ ಪರಿಸರ 

ನೆಚ್ಚಿನ ಆರೋಗ್ಯವು ಲಭಿಸುವುದೋ 

ಅಳಿಯದೆ ಮುನುಕುಲ ಉಳಿಸುವ ಕಾರ್ಯವು 

ನಮ್ಮೊಳ ಸ್ವಚ್ಛತೆಯು 


ಅರಿತಿಹ ರಾಷ್ಟ್ರವು ಮರೆಯದೆ ಕಲಿತಿದೆ 

ಭಾರತದ ಈ ಅತ್ಯುತ್ತಮ ಸಂಪ್ರದಾಯವನು 

ಬೆರೆಯಿರಿ ಬಾಳಿರಿ ಅನುಕ್ಷಣ ಜೊತೆಯಲಿ 

ತಪ್ಪದೆ ಮುಗಿಯುತ ಕರಗಳ ಜೋಡಿಸಿ 

ತಡೆಯಿರಿ ಬಾರದ ಹಾಗೆಯೇ ರೋಗವ 

ಜಾಗೃತವಾಗಿಹಿರೋ. ಜನಗಳೇ ಜಾಗೃತವಾಗಿಹಿರೋ 



ರಚನೆ:ಪ್ರೀತಿ. ಮಾಂತಗೌಡ. ಬನ್ನೆಟ್ಟಿ 

ವಿಜಯಪುರ ಜಿಲ್ಲೆ