ದೀಪಬೆಳಗೋಣ ಬಾ...
ನನಗೆ ನೀನಿರುವೆ..
ನಿನಗಾಗಿ ನಾನೆಂದಿಗೂಇರುವೆ...
ನಾನು ನಿನಷ್ಟೇ ಜಗವಲ್ಲ
ನಾನು ನೀನು ನಿಮ್ಮವರು
ಎಲ್ಲಾ ಧರ್ಮಿಯ ಭಾಷಿಕರ
ಬಹುಜನರಿಗೆ ಶ್ರಮಿಸಿದ
ಎಲ್ಲರಿಗೂ ಮಿಗಿಲಾದ ನಮ್ಮವರಿದ್ದಾರೆ.....
ಬಾ ಹೊಸ್ತಿಲ ದಾಟಿ.
ಮುಂಬಾಗಿಲ ಬಳಿ ನಿಂತು....
ದೀಪ ಬೆಳಗೋಣ...
ಸಹಸ್ರ ತಾರ ಮಂಡಲದಿ
ಜಗಮಗಿಸುವ ಚಂದ್ರನಿದ್ದಾನೆ
ಯುಗ ಯುಗಾಂತರದವರೆಗೂ
ಜಗ ಬೆಳಗುತಲಿರುವವನ....
ಹೊನಲು ಬೆಳಕಲ್ಲಿ ದೃಷ್ಟಿಯಾ ಚಲ್ಲಿ
ಹರಿಸೋಣ ಹಾರೈಸೋಣ...
ಬಾ ಮುಂದಡಿಯಿಟ್ಟು
ನಮ್ಮವರ ಜೊತೆ ನಾವೆಂದು
ಸಂದೇಶ ಸಾರೋಣ.....
ಕೃಷ ಮನದಲ್ಲಿ ಬಲತುಂಬೋಣ
ನಮ್ಮ ಅಂಗೈ ಹಣತೆಯ....
ಪ್ರಜ್ವಲಿಸುವ ಪ್ರಕರ ಬೆಳಕಲ್ಲಿ
ಉಜ್ವಲ ಕಿರಣಗಳು ಹೊಮ್ಮುವವು
ಏಕತೆಯಲಿ ಒಂದೆಂದು....
ಸೌಹಾರ್ದದಿ ನಾವಿಂದು....
ಹೊಂಗಿರಣವ ಹೊರಸೂಸುವ
ತಂಬೆಲರನು ನಾಚಿಸುವ
ಬಂಗಾರದ ಬದುಕಿಗೆ ....
ಸ್ಪೋರ್ತಿಯ ಬೆಳಕ ಹರಿಸೋಣ
ಹಿಂದೆಂದೂ ಕಾಣದ ಸಂಬಂಧಗಳು
ಗೋಚರಿಸುವವು ಬಾ ಹಣತೆ ಬೆಳಗೋಣ
ಒಗ್ಗಟ್ಟಲಿ ಬಲವುಂಟು ಸಾರಿಬಿಡೋಣ
ನಮ್ಮವರ ಛಲದಲ್ಲಿ ಬಲವಾಗಿ
ಒಲವಿಂದ ನಾವೆಂದೂ ಇರೋಣ
ಬಾ ನಾವಿಂದು ದೀಪ ಬೆಳಗೋಣ.......
ನಮ್ಮವರಿಗಾಗಿ ಈ ಘಳಿಗೆ...
ಬರಿದೀಪದ ಬೆಳಕಷ್ಟೇ ಅಲ್ಲಾ
ಬಂದಿಯಾಗಿದ್ದ ಅಗೋಚರದಿಂದ
ನಾವಿಂದು ಸ್ವತಂತ್ರರಾಗೋಣ....
ಬಾ ಮುಂದಡಿ ಇಟ್ಟು ....
ಮುಂಬಾಗಿಲಲಿ ನಿಂತು...
ದೀಪ ಬೆಳಗೋಣ....
ಪ್ರೀತಿ. ಮಾಂತಗೌಡ. ಬನ್ನೆಟ್ಟಿ