ಗೆಳತಿ......

ಸ್ನೇಹವೇಂಬ ಭಂದನದಲಿ,..

ಬಂದು ನಿಂತವಳು...

ಆಡಿ..ಹಾಡಿ..ಕಲಿತು..ನಲಿದ ....

ನಲ್ಮೆಯ ಗೆಳತಿಯೇ ಅವಳು...

ನಕ್ಕು ನಲಿವ ..ಅಕ್ಕರೆಯ ಸ್ನೇಹಿತೆ ಅವಳು...

ಲೆಕ್ಕವಿರದ ರಾಶಿ ನೆನಪು ನೀಡಿ ಹೋದವಳು....


ಮಿಂಚಿನಂತೆ ಸೆಳೆದು ...

ಮೀನುಗೋ ತಾರೆಯಾದಳೂ....

ಮನದ ಮೂಲೆಯಲ್ಲಿ ....

ಮೌನರಾಗ ವಾದಳೂ

ನೀಲಿ ಬಾನಿನಲ್ಲಿ .....

ನಿತ್ಯ ನಲಿವ ನಕ್ಷತ್ರವಾದಳೂ....


ತೂರಿ ಕೊಂಡು ಗಾಳಿಯಲ್ಲಿ ...

ತೇಲೋ ಮೋಡವಾದಳು ..

ನೆನಪಿನಲೆಗಳಲ್ಲಿ ಅವಳು ...

ಮಧುರ ಸ್ವಪ್ನ ವಾದಳು....

ಸೌರಭವು ಸೂಸೊ ಸುಮವೆ ಅವಳು....

ಗಗನ ಕುಸುಮವಾದಳು..... ..


ಹಕ್ಕಿ ಉಲಿವ ಇಂಚರದಲೂ....

ಉಕ್ಕೊ ಕಡಲ ಅಲೆಗಳಲ್ಲೂ...

ಉದಯಿಸುವ ರವಿ ಕಿರಣದಲ್ಲೂ...

ತಂಪನೇರೆವ ತಂಗಾಳಿಯಲ್ಲೂ...

ತಲೆ ದೂಗುವ ಮಾಮರಗಳಲ್ಲೂ..

ಕೋಗಿಲೆಯ ಪಂಚಮ ಸ್ವರಗಳಲ್ಲೂ....


ಬರುವಳಲ್ಲ ಸರ್ವಋತುಗಳಲ್ಲೂ....

ಇರುವಳಲ್ಲ ಯೆಲ್ಲ ಕಡೆಗೂ....

ನೋಡಿರೋಮ್ಮೆ ಮುಗಿಲ ಕಡೆಗೂ....

ರಂಗು ರಂಗಿನಾ ರಂಗವಲ್ಲಿ ....

ಅಗಸವೇ ಅಂಗಳಾಗಿದೆ ...

ಇಂದ್ರಧನುಷ್ ಚಿತ್ರ ಬಿಡಿಸಿ..ಗಮನ ಸೆಳೆವಳು..


ಎಲ್ಲಿ ಹುಡುಕಲೇಂದು ಕೇಳಿದಾಗ ....

ಮುಗಿಲು ಒಮ್ಮೆ ಗುಡುಗಿ ಮಾರ್ಧ್ವನಿಸಿತು ...

ಕೆನ್ನೆ ಮೇಲೆ ಕಣ್ಣೀರ ಹನಿಯ ಹಾಗೇ ...

ಮಳೆ ಹನಿಯೂ ಉದುರಿತು..

ಅವಳ ಇರುವು ನೋಡಿ ಒಮ್ಮೆ ಇಳೆಯು ನಕ್ಕೀತು

ಉಳಿದಳವಳು ಚಿರ ದ್ರುವ ತಾರೆಯಾಗಿ,.ಮುಗಿಲೊಳು...

ರಚನೆ:- ಪ್ರೀತಿ ಮಾಂತೇಶ ಬನ್ನೇಟ್ಟಿ